ಜನಕ ರಾಜನ ಪುತ್ರಿ 'ಸೀತಾಮಾತೆ' ಅಪ್ರತಿಮ ಸುಂದರಿ: ಹೀಗಾಗಿ ರಾಮ, ರಾವಣ ಹುಚ್ಚರಂತೆ ಆಕೆ ಹಿಂದೆ ಬಿದ್ದಿದ್ದರು!
ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಅದೆಷ್ಟು ಸುಂದರವಾಗಿದ್ದಳು ಎಂದರೆ ರಾಮ ಹಾಗೂ ರಾವಣ ಇಬ್ಬರೂ ಆಕೆಯನ್ನೂ ನೋಡಿ ಹುಚ್ಚರಾಗಿದ್ದರು. ಸೀತೆ ಸುಂದರವಾಗಿದ್ದ ಕಾರಣಕ್ಕೆ ರಾಮ ಹಾಗೂ ರಾವಣರ ನಡುವೆ ಯುದ್ಧ ನಡೆದಿತ್ತು.

ಜೈಪುರ:ರಾಮ, ರಾವಣ ಮತ್ತು ಸೀತಾ ಕುರಿತು ರಾಜಸ್ಥಾನ ಸಚಿವರೊಬ್ಬರು ನೀಡಿದ ಹೇಳಿಕೆಯು ವಿವಾದ ಸೃಷ್ಟಿಸಿದೆ. ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ಸೇನಾ ಕಲ್ಯಾಣ ಖಾತೆಯ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರತಿ ಬಾರಿ ಸುದ್ದಿಯಲ್ಲಿರುತ್ತಾರೆ.
ಜುಂಜುನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರು, ರಾಮ ಮತ್ತು ರಾವಣ ಅವರು ಹುಚ್ಚರಂತೆ ಸೀತಾ ಮಾತೆ ಹಿಂದೆ ಬಿದ್ದಿದ್ದರು. ಅದರರ್ಥ ಜನಕ ರಾಜನ ಪುತ್ರಿ ಸೀತಾ ಮಾತೆ ಅಷ್ಟೊಂದು ಸುಂದರಿಯಾಗಿದ್ದಳು ಎಂದು ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಅದೆಷ್ಟು ಸುಂದರವಾಗಿದ್ದಳು ಎಂದರೆ ರಾಮ ಹಾಗೂ ರಾವಣ ಇಬ್ಬರೂ ಆಕೆಯನ್ನೂ ನೋಡಿ ಹುಚ್ಚರಾಗಿದ್ದರು. ಸೀತೆ ಸುಂದರವಾಗಿದ್ದ ಕಾರಣಕ್ಕೆ ರಾಮ ಹಾಗೂ ರಾವಣರ ನಡುವೆ ಯುದ್ಧ ನಡೆದಿತ್ತು' ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ರಾಮ ಹಾಗೂ ರಾವಣ ಇಬ್ಬರೂ ಉತ್ತಮ ವ್ಯಕ್ತಿಗಳು. ಆದರೆ, ಇಬ್ಬರೂ ಕೂಡ ಸೀತಾ ಮಾತೆಗೆ ಹುಚ್ಚರಾಗಿದ್ದರು. ನಿಜಕ್ಕೂ ಸೀತಾ ಮಾತೆ ಸುಂದರವಾಗಿದ್ದಳು. ಇದನ್ನೂ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ' ಎಂದು ಶಾಸಕ ರಾಜೇಂಧ್ರ ಸಿಂಗ್ ಗುಧಾ ಹೇಳಿದ್ದಾರೆ. ಅಷ್ಟಕ್ಕೆ ನಿಲ್ಲದ ಅವರು, ತಮ್ಮನ್ನೇ ಸೀತಾ ಮಾತೆಗೆ ಹೋಲಿಸಿಕೊಂಡಿದ್ದಾರೆ. ನನ್ನಲ್ಲಿರುವ ಗುಣಗಳ ಕಾರಂದಿಂದಾಗಿಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹಾಗೂ ಸಚಿನ್ ಪೈಲಟ್ ಇಬ್ಬರಿಗೂ ನಾನು ಬೇಕಾಗಿದ್ದೇನೆ ಎಂದಿದ್ದಾರೆ.
ಈ ಕಾಂಗ್ರೆಸ್ಸಿಗರು ಹಿಂದೂಗಳನ್ನು ಗೇಲಿ ಮಾಡಲು ಮತ್ತು ಅವರ ಮತ ಬ್ಯಾಂಕ್ ರಾಜಕೀಯವನ್ನು ಇನ್ನಷ್ಟು ಗಟ್ಟಿಮಾಡಲು ಮತ್ತೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ? ಭಗವಾನ್ ಶ್ರೀರಾಮನ ಮೇಲಿನ ಭಾರತದ ನಂಬಿಕೆಯನ್ನು ಹುಚ್ಚ ಎಂದು ಬಣ್ಣಿಸಿದ್ದಾರೆ, ರಾಜಸ್ಥಾನ ಸರ್ಕಾರದ ಸಚಿವ ರಾಜೇಂದ್ರ ಗೂಢಾ ಅವರಿಗೆ ಸ್ವಂತ ಅಸ್ತಿತ್ವದ ಬಗ್ಗೆ ನಾಚಿಕೆಯಾಗಲಿಲ್ಲವೇ? ಇದು ಉದ್ದೇಶಪೂರ್ವಕ ಹೇಳಿಕೆ. ಇಂತಹ ಹೇಳಿಕೆಗಳಿಂದಾಗಿ ಇಂದು ಕಾಂಗ್ರೆಸ್ ಪರಿಸ್ಥಿತಿ ಶೂರ್ಪನಖಿ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ಬಿಜೆಪಿ ಹರಿಹಾಯ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


