ಟೊಮೆಟೊ ಕಾಯಲು ಬೌನ್ಸರ್ ನೇಮಿಸಿದ ವ್ಯಾಪಾರಿ! ಬಿಜೆಪಿ ಜೆಡ್ ಪ್ಲಸ್' ಭದ್ರತೆ ನೀಡಬೇಕು ಎಂದ ಅಖಿಲೇಶ್ ಯಾದವ್
ದೇಶಾದ್ಯಂತ ಟೊಮೊಟೊ ಬೆಲೆ ಗಗನಕ್ಕೇರಿದ್ದು, ಸೇಬಿಗಿಂತ ಬೆಲೆ ಹೆಚ್ಚಾಗಿರುವಂತೆಯೇ ಅವುಗಳನ್ನು ಗ್ರಾಹಕರು ದೋಚದಂತೆ ಜೋಪಾನವಾಗಿ ಕಾಪಾಡುವ ನಿಟ್ಟಿನಲ್ಲಿ ವಾರಣಾಸಿಯ ಲಂಕಾ ಪ್ರದೇಶದ ತರಕಾರಿ ಮಾರಾಟಗಾರರೊಬ್ಬರು ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ.

ವಾರಣಾಸಿ: ದೇಶಾದ್ಯಂತ ಟೊಮೊಟೊ ಬೆಲೆ ಗಗನಕ್ಕೇರಿದ್ದು, ಸೇಬಿಗಿಂತ ಬೆಲೆ ಹೆಚ್ಚಾಗಿರುವಂತೆಯೇ ಅವುಗಳನ್ನು ಗ್ರಾಹಕರು ದೋಚದಂತೆ ಜೋಪಾನವಾಗಿ ಕಾಪಾಡುವ ನಿಟ್ಟಿನಲ್ಲಿ ವಾರಣಾಸಿಯ ಲಂಕಾ ಪ್ರದೇಶದ ತರಕಾರಿ ಮಾರಾಟಗಾರರೊಬ್ಬರು ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ.
ಸಮಾಜವಾದಿ ಪಕ್ಷದ ಕಾರ್ಯಕರ್ತರು ಆಗಿರುವ ಅಜಯ್ ಫೌಜಿ ಈ ರೀತಿ ಬೌನ್ಸರ್ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹುಟ್ಟುಹಬ್ಬದಂದು ಟೊಮೆಟೊ ಆಕಾರದ ಕೇಕ್ ಕತ್ತರಿಸುವ ಮೂಲಕ ಗಮನ ಸೆಳೆದಿದ್ದರು.
ಈ ಕುರಿತು ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಫೌಜಿ, ಟೊಮೆಟೊ ದರದ ಬಗ್ಗೆ ಜನರಲ್ಲಿ ವಾದಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಅಂಗಡಿಯಲ್ಲಿಯೂ ಜನರು ಚೌಕಾಸಿ ಮಾಡಲು ಪ್ರಯತ್ನಿಸಿದರು. ಆದ್ದರಿಂದ ಇಂತಹ ವಾದಗಳನ್ನು ಕೊನೆಗೊಳಿಸಲು ಬೌನ್ಸರ್‌ಗಳನ್ನು ನಿಯೋಜಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.
ಟೊಮೆಟೊವನ್ನು ಕೆಜಿಗೆ 140-160 ರೂ.ಗೆ ಮಾರಾಟ ಮಾಡುತ್ತಿರುವ ಫೌಜಿ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಅಂಗಡಿಯಲ್ಲಿ ಬೌನ್ಸರ್‌ಗಳನ್ನು ನಿಯೋಜಿಸಿದ್ದಾರೆ. ಆದರೆ, ಅವರನ್ನು ಎಷ್ಟು ಮೊತ್ತಕ್ಕೆ ನೇಮಿಸಿಕೊಂಡರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಫೌಜಿ ಮತ್ತು ಅವರ ಬೌನ್ಸರ್‌ಗಳಿಗೆ ಸಂಬಂಧಿಸಿದ ಸುದ್ದಿ ಕ್ಲಿಪ್‌ನ ಚಿತ್ರವನ್ನು ಹಂಚಿಕೊಂಡಿದ್ದು, "ಬಿಜೆಪಿ ಟೊಮೆಟೊಗಳಿಗೆ 'ಜೆಡ್-ಪ್ಲಸ್' ಭದ್ರತೆ ನೀಡಬೇಕು" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


