ಪುಣೆ: ಸಂಬಂಧಿಕರಿಂದಲೇ ಒಂದೇ ಕುಟುಂಬದ 7 ಮಂದಿಯ ಸಾಮೂಹಿಕ ಹತ್ಯೆ, ಐವರ ಬಂಧನ
ಮಹಾರಾಷ್ಟ್ರದ ಪುಣೆಯ ನದಿಯೊಂದರಿಂದ ಹೊರ ತೆಗೆಯಲಾದ ಒಂದೇ ಕುಟುಂಬದ ಏಳು ಮಂದಿ ಮೃತದೇಹಗಳ ತನಿಖೆಯಲ್ಲಿ ಮಹತ್ವದ ಮಾಹಿತಿ ದೊರೆತಿದೆ. ಅವರೆಲ್ಲರೂ ಸಂಬಂಧಿಕರಿಂದಲೇ ಹತ್ಯೆಯಾಗಿದ್ದಾರೆ.

ಪುಣೆ: ಮಹಾರಾಷ್ಟ್ರದ ಪುಣೆಯ ನದಿಯೊಂದರಿಂದ ಹೊರ ತೆಗೆಯಲಾದ ಒಂದೇ ಕುಟುಂಬದ ಏಳು ಮಂದಿ ಮೃತದೇಹಗಳ ತನಿಖೆಯಲ್ಲಿ ಮಹತ್ವದ ಮಾಹಿತಿ ದೊರೆತಿದೆ. ಅವರೆಲ್ಲರೂ ಸಂಬಂಧಿಕರಿಂದಲೇ ಹತ್ಯೆಯಾಗಿದ್ದಾರೆ.
ಈ ಹಿಂದೆ ಆರೋಪಿಯೊಬ್ಬನ ಪುತ್ರನ ಸಾವಿನ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಜನವರಿ 18 ರಿಂದ 24ರ ನಡುವೆ ಭೀಮಾ ನದಿ ದಂಡೆಯಲ್ಲಿ ಮೂರರಿಂದ ಏಳು ವರ್ಷದೊಳಗಿನ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತರ ಸಂಬಂಧಿಕರಾದ ಐವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪುಣೆ: ನದಿಯಲ್ಲಿ ಒಂದೇ ಕುಟುಂಬದ 7 ಮಂದಿಯ ಮೃತದೇಹ ಪತ್ತೆ, ಸಾಮೂಹಿಕ ಆತ್ಮಹತ್ಯೆ ಶಂಕೆ
ತನಿಖೆ ವೇಳೆ ಎಲ್ಲರನ್ನು ಹತ್ಯೆ ಮಾಡಿರುವ ಬಗ್ಗೆ ಕೆಲವೊಂದು ಮಾಹಿತಿ ತಿಳಿದು ಬಂದಿತು. ಆರೋಪಿ ಪೈಕಿ ಒಬ್ಬನಾದ ಅಶೋಕ್ ಪವಾರ್ ಪುತ್ರ ಧನಂಜಯ್ ಪವಾರ್ ಅಪಘಾತದಲ್ಲಿ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ. ಈ ಸಂಬಂಧ ಪುಣೆಯಲ್ಲಿ ಕೇಸ್ ದಾಖಲಾಗಿತ್ತು .
ಇದರಿಂದ ಆಕ್ರೋಶಗೊಂಡಿದ್ದ ಅಶೋಕ್, ತನ್ನ ಮಗನ ಸಾವಿಗೆ ಹತ್ಯೆಯಾದ ಮೋಹನ್ ಪುತ್ರನೇ ಕಾರಣ ಎಂದು ಕುಪಿತಗೊಂಡಿದ್ದ. ಇದೇ ಕಾರಣದಿಂದ ಪ್ರತೀಕಾರವಾಗಿ ಏಳು ಜನರನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಗೋಯೆಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


