ಕುಸಿಯುತ್ತಿರುವ ಜೋಶಿಮಠದಲ್ಲಿ ಬದ್ರಿನಾಥ ದೇವಾಲಯದ ಸಂಪತ್ತು ಸಂರಕ್ಷಣೆಯದ್ದೇ ಅಧಿಕಾರಿಗಳಿಗೆ ಚಿಂತೆ!
ಕುಸಿಯುತ್ತಿರುವ ಜೋಶಿಮಠದಲ್ಲಿ ನರಸಿಂಹ ದೇವಾಲಯದಲ್ಲಿರುವ ಭಗವಾನ್ ಬದ್ರಿನಾಥನ ಸಂಪತ್ತು ಸಂರಕ್ಷಣೆ ವಿಷಯ ಈಗ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಡೆಹ್ರಾಡೂನ್: ಕುಸಿಯುತ್ತಿರುವ ಜೋಶಿಮಠದಲ್ಲಿ ನರಸಿಂಹ ದೇವಾಲಯದಲ್ಲಿರುವ ಭಗವಾನ್ ಬದ್ರಿನಾಥನ ಸಂಪತ್ತು ಸಂರಕ್ಷಣೆ ವಿಷಯ ಈಗ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಅಧಿಕಾರಿಗಳ ಪ್ರಕಾರ ದೇವಾಲಯ ಸದ್ಯಕ್ಕೇನೋ ಸುರಕ್ಷಿತವಾಗಿದೆ. ಆದರೆ ಒಂದು ವೇಳೆ ಪರಿಸ್ಥಿತಿ ಹದಗೆಟ್ಟರೆ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ಮುಂತಾದ ಸಂಪತ್ತನ್ನು ಹೊಂದಿರುವ ಸಂಪತ್ತನ್ನು ರಕ್ಷಿಸಿ ಇಡಲು ಪರ್ಯಾಯ ಸ್ಥಳಕ್ಕಾಗಿ ಹುಡುಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರವಾಗಿ ಹಾನಿಗೀಡಾಗಿರುವ ಸಿಂಗ್ ಧರ್ ವಾರ್ಡ್ ಹಾಗೂ ಜೆಪಿ ಕಾಲೋನಿಗಳು ನರಸಿಂಹ ದೇವಾಲಯದಿಂದ ವೈಮಾನಿಕ ಅಳತೆಯಲ್ಲಿ ಅರ್ಧ ಕಿ.ಮೀ ದೂರದಲ್ಲಷ್ಟೇ ಇರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿರುವ ಅಂಶಗಳಾಗಿವೆ.
ಜೋಶಿಮಠದಲ್ಲಿನ ನರಸಿಂಹ ದೇವಾಲಯದಲ್ಲಿ ವಿಷ್ಣು ಬದ್ರಿನಾಥದ ಪ್ರಮುಖ ದೇವರಾಗಿದ್ದು, ಚಳಿಗಾಲದಲ್ಲಿ ಆಭರಣಗಳನ್ನು ಪರ್ವತಗಳ ಕೆಳಗಿನ ನರಸಿಂಹ ದೇವಾಲಯಕ್ಕೆ ತರಲಾಗುತ್ತದೆ. ನರಸಿಂಹ ದೇವಾಲಯ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿರುಕು ಕಂಡುಬಂದಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಸಂಪತ್ತನ್ನು ವರ್ಗಾಯಿಸಲು ಬೇರೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿದ್ದೇವೆ ಎಂದು ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದ್ದಾರೆ.
ಕೆಲವು ಸ್ಥಳಗಳನ್ನು ಗುರುತಿಸಲಾಗಿದ್ದು, ಪಿಪಲ್ಕೊಟಿಯಲ್ಲಿರುವ ಅತಿಥಿ ಗೃಹ ಅತ್ಯಂತ ಸೂಕ್ತವಾಗಿದೆ ಎಂಬ ಅಭಿಪ್ರಾಯವಿದೆ ಎಂದು ಅಜಯ್ ತಿಳಿಸಿದ್ದಾರೆ. ಕೆಲವು ಮಂದಿ ಪಾಂಡುಕೇಶ್ವರ್ ನಲ್ಲಿನ ಸ್ಥಳವನ್ನು ಸೂಚಿಸಿದ್ದಾರೆ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ, ಅಂತಹ ಪರಿಸ್ಥಿತಿ ಬರುವುದೂ ಬೇಡ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅಜಯ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


