ಪಂಜಾಬ್ ಸಿಎಂ ಭಗವಂತ್ ಮಾನ್ ಯಾರೊಬ್ಬರ ರಿಮೋಟ್ ಕಂಟ್ರೋಲ್ ಆಗಬಾರದು: ರಾಹುಲ್ ಗಾಂಧಿ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪಂಜಾಬ್ ಸಿಎಂ ಯಾರೊಬ್ಬರ ರಿಮೋಟ್ ಕಂಟ್ರೋಲ್ ಆಗಬಾರದು ಮತ್ತು ರಾಜ್ಯವನ್ನು ಸ್ವತಂತ್ರವಾಗಿ ನಡೆಸಬೇಕು...

ಹೋಶಿಯಾರ್ಪುರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪಂಜಾಬ್ ಸಿಎಂ ಯಾರೊಬ್ಬರ ರಿಮೋಟ್ ಕಂಟ್ರೋಲ್ ಆಗಬಾರದು ಮತ್ತು ರಾಜ್ಯವನ್ನು ಸ್ವತಂತ್ರವಾಗಿ ನಡೆಸಬೇಕು ಎಂದು ಸೋಮವಾರ ಹೇಳಿದ್ದಾರೆ.
ಹೋಶಿಯಾರ್ಪುರದಲ್ಲಿ ಇಂದು ಭಾರತ್ ಜೋಡೋ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಪಂಜಾಬ್ ಅನ್ನು ಪಂಜಾಬ್‌ನಿಂದಲೇ ನಡೆಸಬೇಕು. ಅದನ್ನು ದೆಹಲಿಯಿಂದ ನಡೆಸಬಾರದು ಎಂದು ಹೇಳಿದರು.
ನಾನು ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಕೇಳಲು ಬಯಸುತ್ತೇನೆ ನೀವು ಪಂಜಾಬ್‌ನ ಮುಖ್ಯಮಂತ್ರಿ, ಪಂಜಾಬ್ ನಲ್ಲಿ ನೀವೇ ಅಧಿಕಾರ ಚಲಾಯಿಸಬೇಕು. ಭಗವಂತ್ ಮಾನ್ (ಅರವಿಂದ್) ಕೇಜ್ರಿವಾಲ್ ಜಿ ಮತ್ತು ದೆಹಲಿಯ ಒತ್ತಡಕ್ಕೆ ಒಳಗಾಗಬಾರದು" ಎಂದರು.
"ನೀವು ಸ್ವತಂತ್ರವಾಗಿ ಕೆಲಸ ಮಾಡಬೇಕು ಮತ್ತು ಯಾರೊಬ್ಬರ ರಿಮೋಟ್ ಕಂಟ್ರೋಲ್ ಅಡಿಯಲ್ಲಿ ಇರಬಾರದು" ಎಂದು ರಾಹುಲ್ ಗಾಂಧಿ ಹೇಳಿದರು.
ಭಗವಂತ್ ಮಾನ್ ಅವರ ಸರ್ಕಾರದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


