ಉತ್ತರ ಪ್ರದೇಶ: ಶಾಲಾ ಬಾಲಕನಿಗೆ ಕಾರು ಡಿಕ್ಕಿ, 1 ಕಿ.ಮೀ ಎಳೆದೊಯ್ದ ಪಾಪಿ ಚಾಲಕ!
ದೆಹಲಿಯ ಕಾಂಜಾವಾಲಾ ಅಮಾನವೀಯ ಘಟನೆಯಂತೆಯೇ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಕಾರಿನಡಿ ಸಿಲುಕಿದ 15 ವರ್ಷದ ಶಾಲಾ ಬಾಲಕನನ್ನು ಒಂದು ಕಿಲೋಮೀಟರ್ ಎಳೆದೊಯ್ದ ಘಟನೆ ನಡೆದಿದೆ.

ಹರ್ದೋಯ್: ದೆಹಲಿಯ ಕಾಂಜಾವಾಲಾ ಅಮಾನವೀಯ ಘಟನೆಯಂತೆಯೇ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಕಾರಿನಡಿ ಸಿಲುಕಿದ 15 ವರ್ಷದ ಶಾಲಾ ಬಾಲಕನನ್ನು ಒಂದು ಕಿಲೋಮೀಟರ್ ಎಳೆದೊಯ್ದ ಘಟನೆ ನಡೆದಿದೆ.
9ನೇ ತರಗತಿಯ ವಿದ್ಯಾರ್ಥಿ ಕೇತನ್ ಕುಮಾರ್ ಎಂಬಾತ ತನ್ನ ಸೈಕಲ್‌ನಲ್ಲಿ ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಬಿಳಿ ಬಣ್ಣದ ವ್ಯಾಗನರ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಾಲಕನ ಕಾಲು ಕಾರಿನ ಹಿಂಬದಿಯಲ್ಲಿ ಸಿಲುಕಿಕೊಂಡಿದ್ದರೂ ಚಾಲಕ ಕಾರು ನಿಲ್ಲಿಸದೆ 1 ಕಿ.ಮೀ.ವರೆಗೆ ಚಲಾಯಿಸಿದ್ದಾನೆ.
ಚಾಲಕ ಸ್ಥಳದಿಂದ ಪರಾರಿಯಾಗುವ ಪ್ರಯತ್ನದಲ್ಲಿ, ಪ್ರತ್ಯಕ್ಷದರ್ಶಿಗಳು ಕಾರನ್ನು ನಿಲ್ಲಿಸುವಂತೆ ಕೂಗಿದರೂ ಸಹ ಕಾರು ನಿಲ್ಲಿಸದೆ ವಿದ್ಯಾರ್ಥಿಯನ್ನು ಎಳೆದೊಯ್ದಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ, ಕೇತನ್ ತನ್ನ ಕಾಲನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಅಂತಿಮವಾಗಿ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಕಾರು ನಿಲ್ಲಿಸಿದ ನಂತರ ಕೇತನ್ ಅವರನ್ನು ರಕ್ಷಿಸಲಾಗಿದೆ. ಆಕ್ರೋಶಗೊಂಡ ಜನರ ಗುಂಪು ಚಾಲಕನನ್ನು ಹಿಡಿದು ದೊಣ್ಣೆಯಿಂದ ಥಳಿಸಿದೆ. ಕಾರನ್ನು ಕೂಡ ಧ್ವಂಸಗೊಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೋಪಗೊಂಡ ಜನರಿಂದ ಚಾಲಕನನ್ನು ರಕ್ಷಿಸಿ, ವಶಕ್ಕೆ ಪಡೆದಿದ್ದಾರೆ.
ಗಮನಾರ್ಹ ಎಂದರೆ, ಇದೇ ತಿಂಗಳಲ್ಲಿ ವರದಿಯಾದ ಮೂರನೇ ಅಮಾನವೀಯ ಘಟನೆ ಇದಾಗಿದೆ. ಎರಡು ದಿನಗಳ ಹಿಂದೆ, ದೆಹಲಿ ಕಂಜಾವಾಲಾ ಭಯಾನಕ ಸುದ್ದಿ ಮಾಡುತ್ತಿದ್ದಾಗ ನೋಯ್ಡಾದಲ್ಲಿ ಫೂಡ್ ಡೆಲಿವರಿ ಯುವಕನ ಬೈಕ್ ಕಾರೊಂದು ಡಿಕ್ಕಿ ಹೊಡೆದು, ಸುಮಾರು 500 ಮೀಟರ್‌ಗಳವರೆಗೆ ಎಳೆದೊಯ್ದು ಸಾವನ್ನಪ್ಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


