ಅಮೇರಿಕಾ ಪ್ರಯೋಗಾಲಯದ ವರದಿ ಉಲ್ಲೇಖಿಸಿ ಪ್ರಕರಣದಿಂದ ಮುಕ್ತಿ ಕೋರಿದ ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್
ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್ ತಮ್ಮನ್ನು ಎಲ್ಗಾರ್ ಪರಿಷತ್-ಮಾವೊವಾದಿ ಸಂಬಂಧದ ಪ್ರಕರಣದಿಂದ ಕೈಬಿಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಮುಂಬೈ: ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್ ತಮ್ಮನ್ನು ಎಲ್ಗಾರ್ ಪರಿಷತ್-ಮಾವೊವಾದಿ ಸಂಬಂಧದ ಪ್ರಕರಣದಿಂದ ಕೈಬಿಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಅಮೇರಿಕಾದ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುವುದಕ್ಕಾಗಿ ವೆರ್ನಾನ್ ಗೊನ್ಸಾಲ್ವಿಸ್ ಮನವಿ ಮಾಡಿದ್ದಾರೆ.
ವೆರ್ನಾನ್ ಗೊನ್ಸಾಲ್ವಿಸ್ ಅವರನ್ನು 2018 ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು.
ಎಲ್ಗಾರ್ ಪರಿಷತ್-ಮಾವೊವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿರುವ ವೆರ್ನಾನ್ ಗೊನ್ಸಾಲ್ವಿಸ್ ಅವರು ಈಗ ನವಿ ಮುಂಬೈ ನ ತಲೋಜಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಮೇರಿಕಾದ ಡಿಜಿಟಲ್ ವಿಧಿವಿಜ್ಞಾನ ಸಲಹಾ ಕಂಪನಿಯಾಗಿರುವ ಆರ್ಸೆನಲ್ ಕನ್ಸಲ್ಟಿಂಗ್ ನ ವಿಧಿವಿಜ್ಞಾನ ವಿಶ್ಲೇಷಣೆ ಪ್ರಕಾರ, ಮಾಲ್ವೇರ್ ನ್ನು ಬಳಕೆ ಮಾಡಿಕೊಂಡು ತಮ್ಮ ಹಾಗೂ ಇತರ ಆರೋಪಿಗಳ ಕಂಪ್ಯೂಟರ್ ನಲ್ಲಿ ದೋಷಾರೋಪಣೆಗೆ ಪೂರಕವಾದ ದಾಖಲೆಗಳನ್ನು ಸೇರಿಸಲಾಗಿದೆ ಎಂದು ವೆರ್ನಾನ್ ಗೊನ್ಸಾಲ್ವಿಸ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದು ಈ ಪ್ರಕರಣದಲ್ಲಿ ಪ್ರಮುಖವಾದ ಸಾಕ್ಷ್ಯವಾಗಿರುವುದರಿಂದ ಇಡೀ ಪ್ರಕರಣದ ಆಧಾರವೇ ಪ್ರಶ್ನೆಗೆ ಅರ್ಹವಾಗಿದೆ ಎಂದು ವೆರ್ನಾನ್ ಗೊನ್ಸಾಲ್ವಿಸ್ ವಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


