ನವಾಜುದ್ದಿನ್ ಸಿದ್ದಿಕಿ ಕ್ಷಮೆ ಕೇಳಿದ ಮನೆಕೆಲಸದಾಕೆ, ನಟನ ವಿರುದ್ಧ ಆರೋಪಗಳು ಸುಳ್ಳು ಎಂದು ಸ್ಪಷ್ಟನೆ
ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಅವರ ಮನೆಕೆಲಸದಾಕೆ ಸಪ್ನಾ ರಾಬಿನ್ ತಾವು ನವಾಜುದ್ದೀನ್ ಸಿದ್ದಿಕಿ ಕಾರಣದಿಂದಾಗಿ ದುಬೈ ನಲ್ಲಿ ಸಿಲುಕಿಕೊಂಡಿದ್ದಾಗಿ ಆರೋಪ ಮಾಡಿದ್ದರು.

ಮುಂಬೈ: ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಅವರ ಮನೆಕೆಲಸದಾಕೆ ಸಪ್ನಾ ರಾಬಿನ್ ತಾವು ನವಾಜುದ್ದೀನ್ ಸಿದ್ದಿಕಿ ಕಾರಣದಿಂದಾಗಿ ದುಬೈ ನಲ್ಲಿ ಸಿಲುಕಿಕೊಂಡಿದ್ದಾಗಿ ಆರೋಪ ಮಾಡಿದ್ದರು. ಈಗ ಸಪ್ನಾ ಸ್ಪಷ್ಟನೆ ನೀಡಿದ್ದು, ತಾವು ಬಾಲಿವುಡ್ ನಟನ ವಿರುದ್ಧ ಮಾಡಿದ್ದ ಆರೋಪಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ವೀಸಾ ಪಡೆಯುವ ವೆಚ್ಚದಿಂದಾಗಿ ವೇತನವನ್ನು ನೀಡಲಾಗಲಿಲ್ಲ ಎಂದೂ ಸಪ್ನಾ ಆರೋಪಿಸಿದ್ದರು.
ಹೊಸ ವೀಡಿಯೋ ಒಂದರಲ್ಲಿ ಸಪ್ನಾ ತನ್ನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ನವಾಜ್ ವಿರುದ್ಧ ತಾವು ಮಾಡಿದ್ದ ಆರೋಪ ಹಾಗೂ ನವಾಜುದ್ದೀನ್ ಪತ್ನಿ ಆಲಿಯಾ ಸಿದ್ದಿಕಿ ದಾಖಲಿಸಿರುವ ಪ್ರಕರಣ ಎಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ಟೈಮ್ಸ್ ನೌ ಡಿಜಿಟಲ್ ಈ ವಿಡಿಯೋವನ್ನು ಪ್ರಸಾರ ಮಾಡಿದ್ದು, ವಿಡಿಯೋದಲ್ಲಿ ಆಕೆ ಈ ಮಾಹಿತಿ ಬಹಿರಂಗಪಡಿಸಿದ್ದಾಳೆ.
ಸಪ್ನಾ ರಾಬಿನ್ ಹೆಸರು ಸ್ಪಷ್ಟವಾಗಿರದ ಸಂಸ್ಥೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ನಿಯುಕ್ತಿಗೊಂಡಿದ್ದರು ಎಂದು ವಕೀಲರೊಬ್ಬರು ಹೇಳಿದ್ದರು. ಆದರೆ ಆಕೆ ದುಬೈ ನಲ್ಲಿ ಕಲಿಯುತ್ತಿರುವ ನವಾಜುದ್ದೀನ್ ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
2021 ರಲ್ಲಿ ಆಲಿಯಾ ಸಿದ್ದಿಕಿ ತಮ್ಮ ಇಬ್ಬರು ಮಕ್ಕಳೊಂದಿಗೆ ದುಬೈ ಗೆ ತೆರಳಿದ್ದರು ಹಾಗೂ ಕಳೆದ ವರ್ಷ ಭಾರತಕ್ಕೆ ವಾಪಸ್ಸಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


