ಇದೇ ಮೊದಲ ಬಾರಿಗೆ ಏಪ್ರಿಲ್ 1 ರಿಂದ ಜಮ್ಮು-ಕಾಶ್ಮೀರದಲ್ಲಿ ಆಸ್ತಿ ತೆರಿಗೆ ಜಾರಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ 3 ವರ್ಷಗಳ ಬಳಿಕ ಏ.1 ರಿಂದ ಆಸ್ತಿ ತೆರಿಗೆ ವಿಧಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ.

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ 3 ವರ್ಷಗಳ ಬಳಿಕ ಏ.1 ರಿಂದ ಆಸ್ತಿ ತೆರಿಗೆ ವಿಧಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ.
ಆಸ್ತಿ ತೆರಿಗೆ ವಿಧಿಸುವ ನಿರ್ಧಾರವನ್ನು ಜಮ್ಮು-ಕಾಶ್ಮೀರ ಆಡಳಿತ ತೆಗೆದುಕೊಂಡಿದೆ. ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಇಂದು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಘೋಷಿಸಿದ್ದು, ಕೇಂದ್ರಾಡಳಿತ ಪ್ರದೇಶದ ಪುರಸಭೆಗಳು ಮತ್ತು ಮುನ್ಸಿಪಲ್ ಕೌನ್ಸಿಲ್ಗಳಲ್ಲಿ ಜಾರಿಗೆ ಬರಲಿದೆ.
ವಸತಿ ಹಾಗೂ ವಸತಿಯೇತರ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬರುತ್ತಿದೆ. ಈ ಹಿಂದೆ ವಸತಿ ಆಸ್ತಿಗಳಿಗೆ ಸರ್ಕಾರ ವಿನಾಯ್ತಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ವಸತಿ ಆಸ್ತಿಯೊಂದಕ್ಕೆ ಆಸ್ತಿ ತೆರಿಗೆಯನ್ನು, ತೆರಿಗೆ ವಿಧಿಸಬಹುದಾದ ವಾರ್ಷಿಕ ಮೌಲ್ಯ (ಟಿಎವಿ) ಯ ಶೇ.5 ರಷ್ಟು ವಿಧಿಸಲಿದ್ದು, ವಸತಿಯಲ್ಲದ್ದಕ್ಕೆ ಶೇ.6 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಪುರಸಭೆಯ ಪ್ರಕಾರದ ಅಂಶ + ಭೂ ಮೌಲ್ಯದ ಅಂಶ + ವಿಸ್ತೀರ್ಣದ ಅಂಶ + ಮಹಡಿ ಅಂಶ + ಬಳಕೆಯ ಪ್ರಕಾರ + ನಿರ್ಮಾಣದ ವಿಧದ ಅಂಶ + ಕಟ್ಟಡ ನಿರ್ಮಿಸಿದ ವರ್ಷ+ ಸ್ಲ್ಯಾಬ್ ಅಂಶ + ಇತರ ಬಳಕೆಯ ಪ್ರಕಾರಗಳ ಆಧಾರದ ಮೇಲೆ ಟಿಎವಿಯನ್ನು ಲೆಕ್ಕಹಾಕಲಾಗುತ್ತದೆ,” ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.
ಖಾಲಿ ಭೂಮಿ, ರಚನೆ/ಕಟ್ಟಡಕ್ಕೆ ಪೂರಕವಾಗಿಲ್ಲದ ಆಸ್ತಿಗಳಿಗೆ ಸರ್ಕಾರ ವಿನಾಯ್ತಿ ನೀಡಿದ್ದು, ಪ್ರದೇಶದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಲ್ಲಿದ್ದರೆ, ಅಂತಹ ಖಾಲಿ ಭೂಮಿಯಲ್ಲಿ ಯಾವುದೇ ನಿರ್ಮಾಣ/ಅಭಿವೃದ್ಧಿಯನ್ನು ಅನುಮತಿಸಲಾಗುವುದಿಲ್ಲ.
ದೇವಸ್ಥಾನಗಳು, ಮಸೀದಿಗಳು, ಗುರುದ್ವಾರಗಳು, ಚರ್ಚ್‌ಗಳು, ಜಿಯಾರಾತ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಪುರಸಭೆ ಮತ್ತು ಪೂಜಾ ಸ್ಥಳಗಳು ಮತ್ತು ಶವಸಂಸ್ಕಾರ ಮತ್ತು ಸಮಾಧಿ ಸ್ಥಳಗಳನ್ನು ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


