ದೇಶ

ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ: ಲಾರಿ-ಕಾರು ಢಿಕ್ಕಿ, 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವು

ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಲಾರಿ ಮತ್ತು ಕಾರಿನ ನಡುವೆ ಢಿಕ್ಕಿಯಾಗಿ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ.

ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ: ಲಾರಿ-ಕಾರು ಢಿಕ್ಕಿ, 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವು
ಸಾಂದರ್ಭಿಕ ಚಿತ್ರ
Published On :

ಗುಂಟೂರು: ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಲಾರಿ ಮತ್ತು ಕಾರಿನ ನಡುವೆ ಢಿಕ್ಕಿಯಾಗಿ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲಾದಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದ್ದು, ಕೋರಿಶಪಡು ಮಂಡಲದ ಮೇದರಮೆಟ್ಲ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ.  ಮೃತರನ್ನು ಎಸ್.ಎಸ್.ಸಮಂದವರವಿ ವಹೀದಾ (35), ಅವರ ಒಂಬತ್ತು ವರ್ಷದ ಮಗಳು ಆಯೇಷಾ, ಕುಟುಂಬ ಸ್ನೇಹಿತರು ಎಂದು ಗುರುತಿಸಲಾಗಿದೆ.

ಟಿಎಸ್ 07 ಜಿಡಿ 3249 ಸಂಖ್ಯೆಯ ಕಾರು ಒಂಗೋಲ್ ಕಡೆಯಿಂದ ಗುಂಟೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಮೇದರಮೆಟ್ಲ ದಕ್ಷಿಣ ಬೈಪಾಸ್ ಬಳಿ ಬರುವಷ್ಟರಲ್ಲಿ ಗಾಡಿಯ ಟೈರ್ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಪಲ್ಟಿಯಾಗಿ ಇನ್ನೊಂದು ಬದಿಗೆ ಹಾರಿದೆ. ಇದೇ ವೇಳೆ ಗುಂಟೂರಿನಿಂದ ಒಂಗೋಲ್ ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸಹಿತ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಚಾರ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.