ಡಿಸ್ಕಾಂ ಮಂಡಳಿಗಳಿಗೆ ನೇಮಕ: ಆಮ್ ಆದ್ಮಿ ಪಕ್ಷದ ನಾಮನಿರ್ದೇಶಿತರನ್ನು ವಜಾಗೊಳಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್
ದೆಹಲಿಯಲ್ಲಿ ವಿದ್ಯುತ್ ಡಿಸ್ಕಾಮ್ ಗಳ ಮಂಡಳಿಗಳಿಗೆ ನಾಮನಿರ್ದೇಶನಗೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕರನ್ನು ಲೆಫ್ಟಿನೆಂಟ್ ಗೌರ್ನರ್ ವಜಾಗೊಳಿಸಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ವಿದ್ಯುತ್ ಡಿಸ್ಕಾಮ್ ಗಳ ಮಂಡಳಿಗಳಿಗೆ ನಾಮನಿರ್ದೇಶನಗೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕರನ್ನು ಲೆಫ್ಟಿನೆಂಟ್ ಗೌರ್ನರ್ ವಜಾಗೊಳಿಸಿದ್ದು, ಆ ಸ್ಥಾನಕ್ಕೆ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂದು ಗೌರ್ನರ್ ಕಚೇರಿ ಮೂಲಗಳಿಂದ ತಿಳಿದುಬಂದಿದೆ.
ಆಮ್ ಆದ್ಮಿ ಪಕ್ಷದ ವಕ್ತಾರರಾದ ಜಾಸ್ಮೀನ್ ಶಾ, ಆಪ್ ಸಂಸದ ಎನ್ ಡಿ ಗುಪ್ತಾ ಅವರ ಪುತ್ರ ನವೀನ್ ಗುಪ್ತಾ ಹಾಗೂ ಇನ್ನೂ ಇತರ ಖಾಸಗಿ ವ್ಯಕ್ತಿಗಳನ್ನು ಸರ್ಕಾರದ ನಾಮನಿರ್ದೇಶಿತರೆಂದು ಅಕ್ರಮವಾಗಿ ನೇಮಕ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ದೆಹಲಿಯ ಆಡಳಿತಾರೂಢ ಪಕ್ಷ ಆಪ್ ಲೆಫ್ಟಿನೆಂಟ್ ಗವರ್ನರ್ ಆದೇಶವನ್ನು ಅಕ್ರಮ ಹಾಗೂ ಅಸಾಂವಿಧಾನಿಕ ಎಂದು ಆರೋಪಿಸಿದ್ದು ಇಂತಹ ಆದೇಶವನ್ನು ಹೊರಡಿಸಲು ಗವರ್ನರ್ ಗೆ ಅಧಿಕಾರವೇ ಇಲ್ಲ ಎಂದು ಹೇಳಿದೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮಾಹಿತಿಯ ಪ್ರಕಾರ, ಹಣಕಾಸು ಕಾರ್ಯದರ್ಶಿ, ಇಂಧನ ಕಾರ್ಯದರ್ಶಿ ಹಾಗೂ ದೆಹಲಿ ಟ್ರಾನ್ಸ್ಕೋದ ಎಂಡಿ ಡಿಸ್ಕಾಮ್ ಗಳ ಮಂಡಳಿಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ: ಲೆಫ್ಟಿನೆಂಟ್ ಗವರ್ನರ್ ಅವರದ್ದು ಡರ್ಟಿ ಪಾಲಿಟಿಕ್ಸ್ -ಕ್ರೇಜಿವಾಲ್: ದೆಹಲಿ ಸಿಎಂ ಅವರಿಂದ ಕೀಳು ಮಟ್ಟದ ಆರೋಪ- ವಿ.ಕೆ ಸಕ್ಸೇನಾ!
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶಾ, ಗುಪ್ತಾ ಹಾಗೂ ಇನ್ನೂ ಇತರ ಖಾಸಗಿ ವ್ಯಕ್ತಿಗಳನ್ನು ಬಿವೈಪಿಎಲ್, ಬಿಆರ್ ಪಿಎಲ್, ಟಿಪಿಡಿಡಿಎಲ್ ಗಳಿಗೆ ಅಕ್ರಮವಾಗಿ ಸರ್ಕಾರದ ನಾಮನಿರ್ದೇಶನ ಮಾಡಲಾಗಿದೆ ಎಂದು ಗನರ್ವರ್ ಕಚೇರಿ ಹೇಳಿದೆ.
ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಕ್ಷ, ಚುನಾಯಿತ ಸರ್ಕಾರಕ್ಕೆ ವಿದ್ಯುತ್ ಗೆ ಸಂಬಂಧಿಸಿದ ಆದೇಶಗಳನ್ನು ಪ್ರಕಟಿಸುವುದಕ್ಕೆ ಅಧಿಕಾರವಿದೆ ಎಂದು ಸಮರ್ಥಿಸಿಕೊಂಡಿದ್ದು, ಲೆಫ್ಟಿನೆಂಟ್ ಗವರ್ನರ್ ಸುಪ್ರೀಂ ಕೋರ್ತ್ ನ ಎಲ್ಲಾ ಆದೇಶಗಳನ್ನು ಹಾಗೂ ಸಂವಿಧಾನವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


