ದೇಶ

ಪೊಲೀಸ್ ಫೈರಿಂಗ್ ನಲ್ಲಿ ಯುಎಲ್ಎಫ್-ಐ ನಾಯಕ ಸಾವು

ನಿಷೇಧಿತ ಸಂಘಟನೆಯಾಗಿರುವ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಯುಎಲ್ಎಫ್ಎ-ಐ) ನ ನಾಯಕನೊಬ್ಬ ಅಸ್ಸಾಂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಪೊಲೀಸ್ ಫೈರಿಂಗ್ ನಲ್ಲಿ ಯುಎಲ್ಎಫ್-ಐ ನಾಯಕ ಸಾವು
ಯುಎಲ್ಎಫ್-ಐ ಸಂಘಟನೆ ಮೇಲೆ ಪೊಲೀಸ್ ದಾಳಿ
Published On :

ಅಸ್ಸಾಂ: ನಿಷೇಧಿತ ಸಂಘಟನೆಯಾಗಿರುವ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಯುಎಲ್ಎಫ್ಎ-ಐ) ನ ನಾಯಕನೊಬ್ಬ ಅಸ್ಸಾಂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. 

ತಿನ್ಸುಕಿಯಾ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ, ಇದೇ ಪ್ರದೇಶದಲ್ಲಿ ಯುಎಲ್ಎಫ್ಎ-ಐ ನ ನಾಯಕ ಉದಯ್ ಆಕ್ಸೋಮ್ ಹಾಗೂ ಆತನ ಸಹಚರರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. 

ತಿನ್ಸುಕಿಯಾದಲ್ಲಿನ ಭದ್ರತಾ ತಂಡ, ನಿಷೇಧಿತ ಉಗ್ರ ಸಂಘಟನೆಗಳ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿವೆ. ಟಿಕಕ್ ಮುಲುಂಗ್ ಪರ್ಬತ್ ಪ್ರದೇಶದಲ್ಲಿನ ಅಡಗುದಾಣಗಳಿಗೆ ತಲುಪುತ್ತಿದ್ದಂತೆಯೇ ಯುಎಲ್ಎಫ್ಎ ಐ ಕೇಡರ್ ಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಉದಯ್ ಆಕ್ಸೋಮ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.