ದೇಶದ 25 ಹೈಕೋರ್ಟ್ ಗಳಲ್ಲಿ ಸುಮಾರು 60 ಲಕ್ಷ, ಸುಪ್ರೀಂ ಕೋರ್ಟ್ ನಲ್ಲಿ 69 ಸಾವಿರ ಪ್ರಕರಣ ಬಾಕಿ: ಕೇಂದ್ರ ಸರ್ಕಾರ
ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 69,000 ಕೇಸ್ ಗಳು ಬಾಕಿಯಿದ್ದರೆ, ದೇಶದ 25 ಹೈಕೋರ್ಟ್ ಗಳಲ್ಲಿ 60 ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 69,000 ಕೇಸ್ ಗಳು ಬಾಕಿಯಿದ್ದರೆ, ದೇಶದ 25 ಹೈಕೋರ್ಟ್ ಗಳಲ್ಲಿ 60 ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಸುಪ್ರೀಂಕೋರ್ಟ್ ವೆಬ್ ಸೈಟ್ ನಲ್ಲಿನ ವಿವರಗಳನ್ನು ಉಲ್ಲೇಖಿಸಿ, ಫೆಬ್ರವರಿ 1ರವರೆಗೂ ಸುಪ್ರೀಂಕೋರ್ಟ್ ನಲ್ಲಿ ಸುಮಾರು 69, 511 ಕೇಸ್ ಗಳು ಬಾಕಿ ಇರುವುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಫೆಬ್ರವರಿ 1, 2023 ರಂದು ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಗ್ರೀಡ್ (ಎನ್ ಜೆಡಿಸಿ)ಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ದೇಶಾದ್ಯಂತ ಹೈಕೋರ್ಟ್ ಗಳಲ್ಲಿ 59, 87,477 ಕೇಸ್ ಗಳು ಬಾಕಿಯಿವೆ ಎಂದು ಅವರು ತಿಳಿಸಿದರು.
ಈ ಪೈಕಿ ದೇಶದ ಅತ್ಯಂತ ದೊಡ್ಡ ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್ ನಲ್ಲಿ 10. 30 ಲಕ್ಷ ಕೇಸ್ ಗಳು ಬಾಕಿ ಉಳಿದಿವೆ. ಸಿಕ್ಕಿಂ ಹೈಕೋರ್ಟ್ ನಲ್ಲಿ ಕನಿಷ್ಠ 171 ಕೇಸ್ ಗಳು ಬಾಕಿಯಿವೆ.
ಬಾಕಿ ಪ್ರಕರಣಗಳ ವಿಲೇವಾರಿಗೆ ಪೂರಕ ವಾತವಾರಣ ನಿರ್ಮಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ರಿಜಿಜು ಸದನಕ್ಕೆ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


