ದೇಶ

ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 33ಕ್ಕೆ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಶೇ 33 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನೇಕ ಸಲಹೆಗಳನ್ನು ನೀಡಿದೆ. ಆದರೆ, 2022ರ ಜನವರಿ 1 ಕ್ಕೆ ಸದ್ಯ ಮಹಿಳೆಯರ ನಿಜವಾದ ಸಾಮರ್ಥ್ಯವು ಶೇ 11.75 ರಷ್ಟಿದೆ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಿದೆ.

ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 33ಕ್ಕೆ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ಪ್ರಾತಿನಿಧಿಕ ಚಿತ್ರ
Published On :

ನವದೆಹಲಿ: ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಶೇ 33 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನೇಕ ಸಲಹೆಗಳನ್ನು ನೀಡಿದೆ. ಆದರೆ, 2022ರ ಜನವರಿ 1 ಕ್ಕೆ ಸದ್ಯ ಮಹಿಳೆಯರ ನಿಜವಾದ ಸಾಮರ್ಥ್ಯವು ಶೇ 11.75 ರಷ್ಟಿದೆ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಿದೆ.

ಎಲ್ಲಾ ರಾಜ್ಯ ಸರ್ಕಾರಗಳು ಮಹಿಳಾ ಪೊಲೀಸರ ಪ್ರಾತಿನಿಧ್ಯವನ್ನು ಒಟ್ಟು ಬಲದ 33 ಪ್ರತಿಶತಕ್ಕೆ ಹೆಚ್ಚಿಸಲು ಗೃಹ ಸಚಿವಾಲಯವು 2013 ರ ಏಪ್ರಿಲ್ 22, 2014 ರ ಮೇ 21, 2015 ರ ಮೇ 12, 2019 ರ ಜೂನ್ 21, 2021ರ ಜೂನ್ 22 ಮತ್ತು 2022ರಲ ಏಪ್ರಿಲ್ 13 ರ ದಿನಾಂಕದಂದು ರಾಜ್ಯಗಳಿಗೆ ಸಲಹೆಗಳನ್ನು ನೀಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿಪಿಆರ್ & ಡಿ) ಸಂಗ್ರಹಿಸಿದ ಮಾಹಿತಿ ಪ್ರಕಾರ, 2022ರ ಜನವರಿ 1 ರಂತೆ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಸಾಮರ್ಥ್ಯವು ಅಖಿಲ ಭಾರತ ಮಟ್ಟದಲ್ಲಿ ಶೇ 11.75 ರಷ್ಟಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಹೇಳಿದರು.

<strong>ನಿತ್ಯಾನಂದ ರೈ </strong>
ನಿತ್ಯಾನಂದ ರೈ

ಲಡಾಖ್ ಪೊಲೀಸ್ ಪಡೆಯಲ್ಲಿ ಅತಿ ಹೆಚ್ಚು ಶೇಕಡಾವಾರು ಮಹಿಳೆಯರನ್ನು ಹೊಂದಿದೆ (ಶೇ 28.3), ಆಂಧ್ರಪ್ರದೇಶ (ಶೇ 21.7), ಚಂಡೀಗಢ (ಶೇ 21.6) ಮತ್ತು ಬಿಹಾರ (ಶೇ 21.2) ನಂತರದ ಸ್ಥಾನದಲ್ಲಿದೆ.

ಜಮ್ಮು ಮತ್ತು ಕಾಶ್ಮೀರ (ಶೇ 3.2), ತ್ರಿಪುರ (ಶೇ 5.29) ಮತ್ತು ಮೇಘಾಲಯ (ಶೇ 5.9) ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿವೆ. 

ಖಾಲಿ ಇರುವ ಕಾನ್‌ಸ್ಟೇಬಲ್‌ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಳನ್ನು ಪರಿವರ್ತಿಸುವ ಮೂಲಕ ಮಹಿಳಾ ಕಾನ್‌ಸ್ಟೆಬಲ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳ ಹೆಚ್ಚುವರಿ ಹುದ್ದೆಗಳನ್ನು ರಚಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಮೂವರು ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು 10 ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಇರಬೇಕು. ಇದರಿಂದಾಗಿ ಮಹಿಳಾ ಸಹಾಯ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.