ಸರ್ನಾ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಡಿ.30 ರಂದು ಭಾರತ್ ಬಂದ್ ಗೆ ಕರೆ
ಬುಡಕಟ್ಟು ಸಂಘಟನೆ ಆದಿವಾಸಿ ಸೆಂಗೆಲ್ ಅಭಿಯಾನ್(ಎಎಸ್‌ಎ) ತನ್ನ ದೀರ್ಘಕಾಲದ ಬೇಡಿಕೆಯಾದ ಸರ್ನಾ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಡಿಸೆಂಬರ್ 30 ರಂದು "ಸಾಂಕೇತಿಕ" ಭಾರತ್ ಬಂದ್‌ಗೆ ಬುಧವಾರ ಕರೆ ನೀಡಿದೆ.

ಜೆಮ್‌ಶೆಡ್‌ಪುರ: ಬುಡಕಟ್ಟು ಸಂಘಟನೆ ಆದಿವಾಸಿ ಸೆಂಗೆಲ್ ಅಭಿಯಾನ್(ಎಎಸ್‌ಎ) ತನ್ನ ದೀರ್ಘಕಾಲದ ಬೇಡಿಕೆಯಾದ ಸರ್ನಾ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಡಿಸೆಂಬರ್ 30 ರಂದು "ಸಾಂಕೇತಿಕ" ಭಾರತ್ ಬಂದ್‌ಗೆ ಬುಧವಾರ ಕರೆ ನೀಡಿದೆ.
ಎಎಸ್‌ಎ ಅಧ್ಯಕ್ಷ ಸಲ್ಖಾನ್ ಮುರ್ಮು ಮಾತನಾಡಿ, ಸರ್ನಾ ಧರ್ಮ ಸಂಹಿತೆಯು ದೇಶದ 15 ಕೋಟಿ ಬುಡಕಟ್ಟು ಜನಾಂಗದವರ ಗುರುತಾಗಿದೆ ಮತ್ತು ಬುಡಕಟ್ಟು ಸಮುದಾಯದ ಧರ್ಮಕ್ಕೆ ಮಾನ್ಯತೆ ನಿರಾಕರಿಸುವುದು "ಸಾಂವಿಧಾನಿಕ ಅಪರಾಧಕ್ಕೆ ಸಮಾನ" ಎಂದಿದ್ದಾರೆ.
ಇತರ ಧರ್ಮಗಳನ್ನು ಅಳವಡಿಸಿಕೊಳ್ಳುವಂತೆ ನಮ್ಮ ಸಮುದಾಯವನ್ನು ಒತ್ತಾಯಿಸುವುದು "ಧರ್ಮದ ಗುಲಾಮಗಿರಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಂತೆ" ಎಂದು ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬುಡಕಟ್ಟು ಜನಾಂಗದವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿವೆ ಎಂದು ಆರೋಪಿಸಿದ್ದಾರೆ.
1951 ರ ಜನಗಣತಿಯು ಸರ್ನಾ ಧರ್ಮಕ್ಕೆ ಪ್ರತ್ಯೇಕ ಕೋಡ್ ಅನ್ನು ನೀಡಿತ್ತು. ಆದರೆ ನಂತರ ಕಾಂಗ್ರೆಸ್ ಅದನ್ನು ತೆಗೆದುಹಾಕಿತು ಎಂದು ಮುರ್ಮು, ಈಗ ಬಿಜೆಪಿ ಆದಿವಾಸಿಗಳನ್ನು ಹಿಂದೂಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎಎಸ್‌ಎ ಬುಡಕಟ್ಟು ಸಮುದಾಯದ ಹಿತಾಸಕ್ತಿ ಕಾಪಾಡುವ ಪರವಾಗಿದೆ. ಯಾವ ಪಕ್ಷ ಸರ್ನಾ ಧರ್ಮಕ್ಕೆ ಮಾನ್ಯತೆ ನೀಡುತ್ತದಯೋ ಆ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂದು ಮುರ್ಮು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


