ವಿವಾಹಕ್ಕೆ ಒಪ್ಪದ ಬಾಲ್ಯದ ಗೆಳತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಟ್ರಾನ್ಸ್ಜೆಂಡರ್!
ಸ್ನೇಹಿತೆಗಾಗಿ ಗಂಡಾಗಿ ಬದಲಾಗಿದ್ದ ವ್ಯಕ್ತಿಯೊಬ್ಬ ತನ್ನ 25 ವರ್ಷದ ಬಾಲ್ಯದ ಗೆಳತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ಸ್ನೇಹಿತೆಗಾಗಿ ಗಂಡಾಗಿ ಬದಲಾಗಿದ್ದ ವ್ಯಕ್ತಿಯೊಬ್ಬ ತನ್ನ 25 ವರ್ಷದ ಬಾಲ್ಯದ ಗೆಳತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬೇರೆಯವರ ಜೊತೆ ಸಲುಗೆಯಿಂದ ಇರುವುದರಿಂದ ಕೋಪಗೊಂಡು ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ. ಸರಪಳಿಯಲ್ಲಿ ಕಟ್ಟಿ, ಬ್ಲೇಡ್ ನಿಂದ ಕೊಯ್ದು, ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ. ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈ ಸಮೀಪದ ತಲಂಬೂರಿನಲ್ಲಿ ಈ ಭಯಾನಕ ಘಟನೆ ನಡೆದಿದೆ. ಈ ಭೀಕರ ಹತ್ಯೆ ತಮಿಳುನಾಡಿನಾದ್ಯಂತ ಭಾರೀ ಸಂಚಲನ ಮೂಡಿಸಿದೆ.
ಸಾಫ್ಟ್ ವೇರ್ ಉದ್ಯೋಗಿ ನಂದಿನಿಯನ್ನ (25) ವೆಟ್ರಿಮಾರನ್ (26) ಪ್ರೀತಿಸುತ್ತಿದ್ದ. ಇಬ್ಬರೂ ಮಧುರೈನಲ್ಲಿ ಒಂದೇ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಇಬ್ಬರೂ ಒಂದೇ ಸಾಫ್ಟ್ವೇರ್ ಕಂಪನಿಗೆ ಸೇರಿದ್ದರು. ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರಿಂದ ನಂದಿನಿಯನ್ನ ಮದುವೆಯಾಗುವುದಾಗಿ ವೆಟ್ರಿ ಮಾರನ್ ಕೇಳಿಕೊಂಡಿದ್ದಾನೆ, ಆದರೆ ನಂದಿನಿ ಒಪ್ಪಿರಲಿಲ್ಲ. ಹಾಗಾಗಿ ಆಕೆಯನ್ನ ಕೊಲೆ ಮಾಡುವ ನಿರ್ಧಾರ ಕೈಗೊಂಡಿದ್ದಾನೆ.
ನಂದಿನಿ ಮದುವೆಗೆ ಒಪ್ಪದಿರಲು ಪ್ರಮುಖ ಕಾರಣ ವೇಟ್ರಿಮಾರನ್ ಒಬ್ಬ ಟ್ರಾನ್ಸ್ಜೆಂಡರ್. ಆತನ ಮೊದಲ ಹೆಸರು ಪಾಂಡಿ ಮಹೇಶ್ವರಿ. ಈ ಇಬ್ಬರು ಚಿಕ್ಕಂದಿನಿಂದಲೂ ಒಟ್ಟಿಗೆ ಓದಿದ್ದರು. ಮಹೇಶ್ವರಿ ವೇಟ್ರಿ ಮಾರನ್ ಅಗಿ ಬದಲಾದ ನಂತರ ನಂದಿನಿಯನ್ನು ವಿವಾಹವಾಗಲು ಬಯಸಿದ್ದಾನೆ. ಆದರೆ ನಂದಿನಿ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಕಳೆದ 6 ತಿಂಗಳಿನಿಂದ ಬೇರೆ ಯುವಕನ ಜೊತೆಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದಳು. ಹಾಗಾಗಿ ಆಕೆಯನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ನಂದಿನಿ ಹುಟ್ಟುಹಬ್ಬದ ದಿನವಾದ ಶನಿವಾರ, ಆರೋಪಿ ವೆಟ್ರಿಮಾರನ್ ಆಕೆಗೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಹೊರಗೆ ಕರೆದೊಯ್ದಿದ್ದ. ಆರೋಪಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕಟ್ಟಿಹಾಕಿ ಬ್ಲೇಡ್‌ನಿಂದ ಗಾಯಗೊಳಿಸಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


