ಸಾಕು ಬೆಕ್ಕು ಕಚ್ಚಿ ತಂದೆ-ಮಗ ದಾರುಣ ಸಾವು: ಒಂದೇ ವಾರದ ಅವಧಿಯಲ್ಲಿ ಇಬ್ಬರು ಬಲಿ!
ಉತ್ತರ ಪ್ರದೇಶದ ಕಾನ್ಪುರದಲ್ಲಿ ತಂದೆ ಮತ್ತು ಮಗ ಡೆಡ್ಲಿ ರೆಬೀಸ್ ಗೆ ಬಲಿಯಾಗಿದ್ದಾರೆ. ಮೃತರ ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ತಂದೆ ಮತ್ತು ಮಗ ಡೆಡ್ಲಿ ರೆಬೀಸ್ ಗೆ ಬಲಿಯಾಗಿದ್ದಾರೆ. ಮೃತರ ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಕಾನ್ಪುರ ನಗರದ ಅಕ್ಬರ್ ಪುರದಲ್ಲಿ ಮೃತರ ನಿವಾಸ ಇತ್ತು. ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು. ತುಂಬಾ ಮುದ್ದಿನಿಂದ ಬೆಕ್ಕನ್ನು ಸಾಕಿದ್ದರು. ಒಂದು ದಿನ ಆ ಬೆಕ್ಕಿಗೆ ಬೀದಿ ನಾಯಿಯೊಂದು ಕಚ್ಚಿತ್ತು. ಕಚ್ಚಿದ್ದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್ ಲಕ್ಷಗಳು ಕಾಣಿಸಿಕೊಂಡಿದ್ದವು.
ಎಂದಿನಂತೆ ಬೆಕ್ಕಿನ ಜೊತೆ ಮನೆಯ ಸದಸ್ಯರು ಆಟವಾಡುತ್ತಿರುವಾಗ ಒಂದು ದಿನ ಅದು ತನ್ನ ಮಾಲೀಕನ ಮಗನಿಗೆ ಗಾಯ ಮಾಡಿತ್ತು. ಕೆಲ ದಿನಗಳ ಬೆನ್ನಲ್ಲೇ ಆತನ ಆರೋಗ್ಯ ಹದಗೆಡಲು ಶುರುವಾಯಿತು. ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿ ಮೃತಪಟ್ಟಿದ್ದ. ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಯ್ತು. ಅವರೂ ಕೂಡ ರೇಬಿಸ್ನಿಂದ ಸಾವನ್ನಪ್ಪಿದರು.
ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ. ಜೊತೆಗೆ ಆ ಪ್ರದೇಶದಲ್ಲಿ ಓಡಾಡೋದಕ್ಕೂ ಅಂಜುತ್ತಿದ್ದಾರೆ. ಸದ್ಯ ಉಳಿದಿರುವ ಅವರ ಕುಟುಂಬಸ್ಥರನ್ನು ಕಾನ್ಪುರಕ್ಕೆ ಕಳುಹಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


