ಬಹುತೇಕ ಭಾರತೀಯ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾರೆ: ಗುಲಾಂ ನಬಿ ಆಜಾದ್
ಬಹುತೇಕ ಭಾರತೀಯ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾರೆ. ಇದಕ್ಕೆ ಉದಾಹರಣೆಯಂತೆ ಕಾಶ್ಮೀರಿ ಕಣಿವೆಯಲ್ಲಿ ಬಹುಪಾಲು ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ದೋಡಾ: ಬಹುತೇಕ ಭಾರತೀಯ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾರೆ. ಇದಕ್ಕೆ ಉದಾಹರಣೆಯಂತೆ ಕಾಶ್ಮೀರಿ ಕಣಿವೆಯಲ್ಲಿ ಬಹುಪಾಲು ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಮೈಲೇಜ್ ಪಡೆಯಲು ಧರ್ಮ ಬಳಸಬಾರದು. ರಾಜಕೀಯದಲ್ಲಿ ಧರ್ಮವನ್ನು ಆಶ್ರಯಿಸುವವರು ದುರ್ಬಲರು ಎಂದು ಹೇಳಿದರು. ಕೆಲವರು (ಮುಸ್ಲಿಮರು) ಹೊರಗಿನಿಂದ ಬಂದಿದ್ದಾರೆ ಮತ್ತು ಕೆಲವರು ಬಂದಿಲ್ಲ ಎಂದು ಕೆಲ ಬಿಜೆಪಿ ನಾಯಕರು ಹೇಳುತ್ತಾರೆ. ಯಾರೂ ಹೊರಗಿನಿಂದ ಅಥವಾ ಒಳಗಿನಿಂದ ಬಂದಿಲ್ಲ. ಇಸ್ಲಾಂ ಕೇವಲ 1,500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತು. ಹಿಂದೂ ಧರ್ಮವು ಬಹಳ ಹಳೆಯದು. ಮುಸ್ಲಿಮರಲ್ಲಿ ಸುಮಾರು 10-20 ಮಂದಿ ಹೊರಗಿನಿಂದ ಬಂದಿರಬೇಕು, ಕೆಲವರು ಮೊಘಲ್ ಸೈನ್ಯದಲ್ಲಿದ್ದರು ಎಂದರು.
ಭಾರತದಲ್ಲಿ ಇತರ ಎಲ್ಲಾ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡರು. ಇದಕ್ಕೆ ಒಂದು ಉದಾಹರಣೆ ಕಾಶ್ಮೀರದಲ್ಲಿ ಸಿಗುತ್ತದೆ. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿದ್ದ ಮುಸ್ಲಿಮರು ಯಾರು? ಅವರೆಲ್ಲರೂ ಕಾಶ್ಮೀರಿ ಪಂಡಿತರು. ಅವರು ಇಸ್ಲಾಂಗೆ ಮತಾಂತರಗೊಂಡರು. ಎಲ್ಲರೂ ಈ ಧರ್ಮದಲ್ಲಿ ಹುಟ್ಟಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು.
ಹಿಂದೂಗಳು ಸತ್ತರೆ ಅವರು ಅಂತ್ಯಸಂಸ್ಕಾರ ಮಾಡುತ್ತಾರೆ. ಅವರನ್ನು ವಿವಿಧ ಸ್ಥಳಗಳಲ್ಲಿ ಸುಡಲಾಗುತ್ತದೆ. ಅವುಗಳ ಚಿತಾಭಸ್ಮವನ್ನು ನದಿ ನೀರಲ್ಲಿ ಬಿಡಲಾಗುತ್ತದೆ. ನಾವು ಆ ನೀರನ್ನು ಕುಡಿಯುತ್ತೇವೆ. ನಂತರ, ನೀರಿನಲ್ಲಿ ಸುಟ್ಟ ಬೂದಿ ಇರುವುದನ್ನು ಯಾರು ನೋಡುತ್ತಾರೆ? ಜನರು ಆ ನೀರನ್ನು ಕುಡಿಯುತ್ತಾರೆ. ಅದೇ ರೀತಿ ಮುಸ್ಲಿಮರ ಮಾಂಸ ಮತ್ತು ಮೂಳೆಗಳು ರಾಷ್ಟ್ರದ ಮಣ್ಣಿನ ಭಾಗವಾಗುತ್ತವೆ. ಅವರು ಕೂಡ ಈ ನೆಲದ ಭಾಗವಾಗುತ್ತಾರೆ. ಅವರ ಮಾಂಸ ಮತ್ತು ಮೂಳೆಗಳು ಭಾರತ ಮಾತೆಯ ಮಣ್ಣಿನ ಭಾಗವಾಗುತ್ತವೆ. ಹಿಂದೂಗಳು ಮತ್ತು ಮುಸ್ಲಿಮರು ಈ ನೆಲದಲ್ಲಿ ವಿಲೀನಗೊಳ್ಳುತ್ತಾರೆ. ಅವರ ನಡುವೆ ಏನು ವ್ಯತ್ಯಾಸವಿದೆ? ಎಂದು ಅವರು ಪ್ರಶ್ನಿಸಿದರು.
ಮತಕ್ಕಾಗಿ ಧರ್ಮದ ಬಳಕೆ ವಿರುದ್ಧ ಕಿಡಿಕಾರಿದ ಆಜಾದ್, "ರಾಜಕೀಯದಲ್ಲಿ ಧರ್ಮವನ್ನು ಆಶ್ರಯಿಸುವವರು ದುರ್ಬಲರು, ರಾಜಕೀಯದಲ್ಲಿ ಧರ್ಮವನ್ನು ಮತಬ್ಯಾಂಕ್ ಆಗಿ ಬಳಸಬಾರದು, ಹಿಂದೂ ಮತ್ತು ಮುಸ್ಲಿಂ ಹೆಸರುಗಳನ್ನು ಆಧರಿಸಿ ಮತದಾನ ಮಾಡಬಾರದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


