ದೇಶ

ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ಬೀಗ ತಯಾರಿಸಿದ ಕುಶಲಕರ್ಮಿ

ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾಗಿರುವ ಅಲಿಗಢದ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ ತಯಾರಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ಮುಂದಿನ ವರ್ಷ ಜನವರಿಯಲ್ಲಿ ಭಕ್ತರ...

ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ಬೀಗ ತಯಾರಿಸಿದ ಕುಶಲಕರ್ಮಿ
ರಾಮ ಮಂದಿರ
Published On :

ಅಲಿಗಢ: ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾಗಿರುವ ಅಲಿಗಢದ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ ತಯಾರಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ಮುಂದಿನ ವರ್ಷ ಜನವರಿಯಲ್ಲಿ ಭಕ್ತರ ದರ್ಶನಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.

ಭಗವಾನ್ ರಾಮನ ಕಟ್ಟಾ ಭಕ್ತರಾದ ಕುಶಲಕರ್ಮಿ ಸತ್ಯ ಪ್ರಕಾಶ್ ಶರ್ಮಾ ಅವರು, ಈ ವರ್ಷದ ಕೊನೆಯಲ್ಲಿ ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು "ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಲಾಕ್" ಅನ್ನು ತಯಾರಿಸಲು ತಿಂಗಳುಗಟ್ಟಲೆ ಶ್ರಮಿಸಿದ್ದಾರೆ.

ಲಕ್ಷಾಂತರ ಭಕ್ತರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದೇವೆ ಮತ್ತು ಈ ಬೀಗವನ್ನು ಎಲ್ಲಿ ಬಳಸಬೇಕು ಎಂಬುದನ್ನು ನಂತರ ನಿರ್ಧರಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಶರ್ಮಾ ಅವರು ಕುಟುಂಬವು ಒಂದು ಶತಮಾನಕ್ಕೂ ಹೆಚ್ಚು ಕಾಲ ಕೈಯಿಂದ ಮಾಡಿದ ಬೀಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಶರ್ಮಾ ಅವರು ಕಳೆದ 45 ವರ್ಷಗಳಿಂದ ತಾಲಾ ನಗರಿ ಅಥವಾ ಬೀಗಗಳ ನಗರ ಎಂದು ಕರೆಯಲ್ಪಡುವ ಅಲಿಗಢದಲ್ಲಿ ಬೀಗಗಳನ್ನು ತಯಾರಿಸುತ್ತಿದ್ದಾರೆ.

ಈಗ ರಾಮಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ, 4.5 ಅಡಿ ಅಗಲ, 9.5 ಇಂಚು ದಪ್ಪವಿರುವ ಈ ದೈತ್ಯ ಬೀಗವನ್ನು ನಾಲ್ಕು ಅಡಿ ಕೀಲಿಯೊಂದಿಗೆ ಸ್ವಂತ ಹಣದಿಂದ ನಿರ್ಮಿಸಿದ್ದಾರೆ. ಈ ಬೀಗ ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಶರ್ಮಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.