ದೆಹಲಿ ಬಿಜೆಪಿ ತಂಡಕ್ಕೆ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸೇರ್ಪಡೆ
ಬಿಜೆಪಿ ಹಿರಿಯ ನಾಯಕಿ, ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರ ಒಳಗೊಂಡಂತೆ ಹಲವು ಯುವಕರನ್ನು ಹೊಂದಿರುವ ದೆಹಲಿ ಭಾರತೀಯ ಜನತಾ ಪಕ್ಷದ ಹೊಸ ಪದಾಧಿಕಾರಿಗಳ ತಂಡವನ್ನು ಮಂಗಳವಾರ...

ನವದೆಹಲಿ: ಬಿಜೆಪಿ ಹಿರಿಯ ನಾಯಕಿ, ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರ ಒಳಗೊಂಡಂತೆ ಹಲವು ಯುವಕರನ್ನು ಹೊಂದಿರುವ ದೆಹಲಿ ಭಾರತೀಯ ಜನತಾ ಪಕ್ಷದ ಹೊಸ ಪದಾಧಿಕಾರಿಗಳ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.
ಹರ್ಷ್ ಮಲ್ಹೋತ್ರಾ, ಯೋಗೇಂದ್ರ ಚಂದೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ಅವರು ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.
ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಘೋಷಿಸಿರುವ ನೂತನ ತಂಡದಲ್ಲಿ ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಮಹಿಳಾ ಪದಾಧಿಕಾರಿಗಳೂ ಇದ್ದಾರೆ.
ಎಂಟು ಕಾರ್ಯದರ್ಶಿಗಳಲ್ಲಿ ಬಾನ್ಸುರಿ ಸ್ವರಾಜ್, ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರ ಹರೀಶ್ ಖುರಾನಾ ಮತ್ತು ಇಂಪ್ರಿತ್ ಸಿಂಗ್ ಬಕ್ಷಿ ಅವರು ಸೇರಿದ್ದಾರೆ.
ಹೊಸದಾಗಿ ನೇಮಕಗೊಂಡ ಎಂಟು ಉಪಾಧ್ಯಕ್ಷರಲ್ಲಿ ವಿಷ್ಣು ಮಿತ್ತಲ್, ದಿನೇಶ್ ಪ್ರತಾಪ್ ಸಿಂಗ್, ಮಾಜಿ ಮೇಯರ್ ಲತಾ ಗುಪ್ತಾ ಮತ್ತು ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಸಿಂಗ್ ಇದ್ದಾರೆ.
ಲಕ್ಷ್ಮಿನಗರ ಶಾಸಕ ಅಭಯ್ ವರ್ಮಾ ಅವರು ದೆಹಲಿ ಬಿಜೆಪಿಯ ಮುಖ್ಯ ವಕ್ತಾರ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


