ಆಪರೇಷನ್ ಕಾವೇರಿ: ಸಂಘರ್ಷ ಪೀಡಿತ ಸುಡಾನ್ ನಿಂದ ಬೆಂಗಳೂರಿಗೆ ಮತ್ತೆ 229 ಭಾರತೀಯರ ರವಾನೆ
ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ತನ್ನ ಕಾರ್ಯಾಚರಣೆಯಡಿಯಲ್ಲಿ ಭಾರತವು ಭಾನುವಾರ ಮತ್ತೆ 229 ಜನರ ಮತ್ತೊಂದು ಬ್ಯಾಚ್ ಅನ್ನು ದೆಹಲಿಗೆ ಕರೆತಂದಿದೆ.

ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ತನ್ನ ಕಾರ್ಯಾಚರಣೆಯಡಿಯಲ್ಲಿ ಭಾರತವು ಭಾನುವಾರ ಮತ್ತೆ 229 ಜನರ ಮತ್ತೊಂದು ಬ್ಯಾಚ್ ಅನ್ನು ಬೆಂಗಳೂರಿಗೆ ಕರೆತಂದಿದೆ.
365 ಜನರು ಆಫ್ರಿಕನ್ ದೇಶ ಸುಡಾನ್ ನಿಂದ ದೆಹಲಿಗೆ ಮರಳಿದ ಒಂದು ದಿನದ ನಂತರ, ಮತ್ತೊಂದು ಬ್ಯಾಚ್ ನಲ್ಲಿ ಇಂದು 229 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, #OperationKaveri ಮತ್ತೊಂದು ವಿಮಾನವು 229 ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಕಾವೇರಿ ಹೆಸರಿನ ಸ್ಥಳಾಂತರಿಸುವ ಕಾರ್ಯಾಚರಣೆಯ ಅಡಿಯಲ್ಲಿ, ಶುಕ್ರವಾರ ಎರಡು ಬ್ಯಾಚ್‌ಗಳಲ್ಲಿ 754 ಜನರು ಭಾರತಕ್ಕೆ ಆಗಮಿಸಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಡಾನ್‌ನಿಂದ ಮನೆಗೆ ಮರಳಿದ ಒಟ್ಟು ಭಾರತೀಯರ ಸಂಖ್ಯೆ ಈಗ 1,954 ಆಗಿದೆ. ಸೌದಿ ಅರೇಬಿಯಾದ ಜೆಡ್ಡಾ ನಗರದಿಂದ ಭಾರತೀಯರನ್ನು ಮರಳಿ ಕರೆತರಲಾಯಿತು, ಅಲ್ಲಿ ಭಾರತವು ಸ್ಥಳಾಂತರಿಸುವವರಿಗೆ ಶಿಬಿರವನ್ನು ಸ್ಥಾಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


