ಪೂರ್ವ ಭಾರತದಲ್ಲಿ ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ: ಐಎಂಡಿ
ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೊದಲ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ದೇಶದ ದಕ್ಷಿಣ ಪ್ರದೇಶದಲ್ಲಿ 46-55 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ನವದೆಹಲಿ: ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೊದಲ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ದೇಶದ ದಕ್ಷಿಣ ಪ್ರದೇಶದಲ್ಲಿ 46-55 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಆದಾಗ್ಯೂ, ಈ ಶಾಖ ಸೂಚ್ಯಂಕವು ಅಮೆರಿಕ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸೂತ್ರವನ್ನು ಆಧರಿಸಿದೆ. ಭಾರತದ ಮೇಲಿನ ತಾಪಮಾನವನ್ನು ಮೌಲ್ಯೀಕರಿಸಿಲ್ಲ.
ಶಾಖ ಸೂಚ್ಯಂಕವು ಸಾಪೇಕ್ಷ ಆರ್ದ್ರತೆ ಮತ್ತು ಗಾಳಿಯ ಉಷ್ಣತೆಯೊಂದಿಗೆ ಸಂಯೋಜಿಸಿದಾಗ ಮಾನವ ದೇಹ ಅನುಭವಿಸುವ ತಾಪಮಾನವನ್ನು ಅಳೆಯುವ ಸೂಚ್ಯಂಕವಾಗಿದೆ. "ಈ ಸೂಚ್ಯಂಕವು ಅಮೆರಿಕ ಹವಾಮಾನ ಸಂಸ್ಥೆಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸೂತ್ರವನ್ನು ಆಧರಿಸಿದೆ. ಇದು ಭಾರತದ ಮೇಲಿನ ತಾಪಮಾನವನ್ನು ಮೌಲ್ಯೀಕರಿಸಿಲ್ಲ" ಎಂದು ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಅವರು ಹೇಳಿದ್ದಾರೆ.
"ನಾವು ಅದನ್ನು ಪರಿಮಾಣದ ಬದಲಿಗೆ ಗುಣಾತ್ಮಕವಾಗಿ(ನಿರ್ದಿಷ್ಟ ಸ್ಥಳ) ಓದಬೇಕು ಮತ್ತು ಜನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು" ಎಂದು ಅವರು ತಿಳಿಸಿದ್ದಾರೆ.
ಬಿಹಾರ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಪೂರ್ವ ಭಾರತದ ಕೆಲವು ಭಾಗಗಳು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಎದುರಿಸುವ ಸಾಧ್ಯತೆಯಿದೆ ಮತ್ತು ಕೆಲವು ದಿನಗಳಲ್ಲಿ ಉಷ್ಣಹವೆ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


