ನೇಪಾಳದಲ್ಲಿನ ಮೌಂಟ್ ಅನ್ನಪೂರ್ಣದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಪತ್ತೆ!
ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ಮಲು ಎಂಬುವವರು ಪತ್ತೆಯಾಗಿದ್ದಾರೆ.

ನವದೆಹಲಿ: ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ಮಲು ಎಂಬುವವರು ಪತ್ತೆಯಾಗಿದ್ದಾರೆ.
ಅನುರಾಗ್ ಮಲು ಮೌಂಟ್ ಅನ್ನಪೂರ್ಣ ನ್ನು ಇಳಿಯುತ್ತಿದ್ದಾಗ ಕ್ಯಾಂಪ್ 3 ರಿಂದ ಸೋಮವಾರದಂದು, ನಾಪತ್ತೆಯಾಗಿದ್ದರು. ಆದರೆ ಅವರು 6000 ಮೀಟರ್ ಎತ್ತರದಿಂದ ಕಂದಕಕ್ಕೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು.
ಇದನ್ನೂ ಓದಿ: ನೇಪಾಳದಲ್ಲಿನ ಮೌಂಟ್ ಅನ್ನಪೂರ್ಣದಲ್ಲಿ ಭಾರತದ ಪರ್ವತಾರೋಹಿ ಬಲ್ಜಿತ್ ಕೌರ್ ನಾಪತ್ತೆ!
ಗುರುವಾರದಂದು ಮಲು ಅವರ ಸಹೋದರ ಮಾತನಾಡಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ರಾಜಸ್ಥಾನದ ಕಿಶನ್ಘರ್ ನ ನಿವಾಸಿಯಾಗಿರುವ ಮಲೂ (34) ಮೌಂಟ್ ಅನ್ನಪೂರ್ಣದ ಕ್ಯಾಂಪ್ 3 ರಿಂದ ಇಳಿಯುತ್ತಿದ್ದಾಗ ಉರುಳಿಬಿದ್ದು ನಾಪತ್ತೆಯಾಗಿದ್ದರು. ಮೌಂಟ್ ಅನ್ನಪೂರ್ಣ ಜಗತ್ತಿನಲ್ಲಿ 10 ನೇ ಅತಿ ಎತ್ತರದ ಪರ್ವತವಾಗಿದೆ.
"ಪರ್ವತಾರೋಹಿ ಅನುರಾಗ್ ಮಲು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಜೀವಂತವಾಗಿದ್ದಾರೆ" ಎಂದು ಅನುರಾಗ್ ಅವರ ಸಹೋದರ ಸುಧೀರ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


