ನೇಪಾಳದಲ್ಲಿನ ಮೌಂಟ್ ಅನ್ನಪೂರ್ಣದಲ್ಲಿ ಭಾರತದ ಪರ್ವತಾರೋಹಿ ಬಲ್ಜಿತ್ ಕೌರ್ ನಾಪತ್ತೆ!
ಭಾರತದ ಮಹಿಳಾ ಪರ್ವತಾರೋಹಿ 27 ವರ್ಷದ ಬಲ್ಜಿತ್ ಕೌರ್, ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ 4 ರಿಂದ ನಾಪತ್ತೆಯಾಗಿದ್ದಾರೆ.

ಕಠ್ಮಂಡು: ಭಾರತದ ಮಹಿಳಾ ಪರ್ವತಾರೋಹಿ 27 ವರ್ಷದ ಬಲ್ಜಿತ್ ಕೌರ್, ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ 4 ರಿಂದ ನಾಪತ್ತೆಯಾಗಿದ್ದಾರೆ. ಪರ್ವತಾ ಅವರೋಹಣದ ವೇಳೆ ಆಕೆ ನಾಪತ್ತೆಯಾಗಿದ್ದಾರೆ ಎಂದು ಪರ್ವತಾರೋಹಣದ ಆಯೋಜಕರು ತಿಳಿಸಿದ್ದಾರೆ.
ಭಾರತದ ಮತ್ತೋರ್ವ ಪರ್ವತಾರೋಹಿ 6000 ಮೀಟರ್ ಗಳ ಎತ್ತರದಿಂದ ಕಂದಕಕ್ಕೆ ಉರುಳಿ ಬಿದ್ದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.
ರಾಜಸ್ಥಾನದ ಕಿಶನ್ಗಡ್ ನ ನಿವಾಸಿಯಾಗಿರುವ ಅನುರಾಗ್ ಮಲು ಎಂಬುವವರು ಮೌಂಟ್ ಅನ್ನಪೂರ್ಣ ನ್ನು ಇಳಿಯುತ್ತಿದ್ದಾಗ ಕ್ಯಾಂಪ್ 3 ರಿಂದ ಸೋಮವಾರದಂದು, ನಾಪತ್ತೆಯಾಗಿದ್ದರು. ಆದರೆ ಅವರು 6000 ಮೀಟರ್ ಎತ್ತರದಿಂದ ಕಂದಕಕ್ಕೆ ಉರುಳಿಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಪ್ರಕಟಿಸಿತ್ತು.
ಈಗ ನಾಪತ್ತೆಯಾಗಿರುವ ಕೌರ್, ಕಳೆದ ವರ್ಷ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಲೋತ್ಸೆ ಪರ್ವತಾರೋಹಣ ಮಾಡಿ 8000 ಮೀಟರ್ ನ್ನು ಒಂದೇ ಸೆಷನ್ ನಲ್ಲಿ ಏರಿದ ಮೊದಲ ಭಾರತೀಯರೆಂಬ ಖ್ಯಾತಿ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


