ಹಿಂಸಾಚಾರಗ್ರಸ್ತ ಬಿಹಾರಕ್ಕೆ 10 ಸಿಎಪಿಎಫ್ ಪಡೆ ರವಾನೆ
ರಾಮನವಮಿ ಆಚರಣೆಯ ವೇಳೆ ಹಿಂಸಾಚಾರ ನಡೆದಿದ್ದ ಬಿಹಾರಕ್ಕೆ, 10 ಸಿಎಪಿಎಫ್ ಪಡೆಗಳನ್ನು ರವಾನೆ ಮಾಡಲಾಗಿದೆ.

ನವದೆಹಲಿ: ರಾಮನವಮಿ ಆಚರಣೆಯ ವೇಳೆ ಹಿಂಸಾಚಾರ ನಡೆದಿದ್ದ ಬಿಹಾರಕ್ಕೆ, 10 ಸಿಎಪಿಎಫ್ ಪಡೆಗಳನ್ನು ರವಾನೆ ಮಾಡಲಾಗಿದೆ. ರಾಮನವಮಿ ಆಚರಣೆಯ ವೇಳೆ ಬಿಹಾರದ ನಳಂದದ ಬಿಹಾರ್ ಶರೀಫ್ ಹಾಗೂ ಸಸ್ರಾಮ್ ಗಳಲ್ಲಿ ಹಿಂಸಾಚಾರ ನಡೆದಿತ್ತು.
ಇದನ್ನೂ ಓದಿ: 2025ರಲ್ಲಿ ಬಿಹಾರದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸಲಾಗುವುದು: ಅಮಿತ್ ಶಾ
ಈ ಹಿನ್ನೆಲೆಯಲ್ಲಿ, 1000 ಸಿಬ್ಬಂದಿಗಳನ್ನೊಳಗೊಂಡ ಸಿಎಪಿಎಫ್ ಪಡೆಯನ್ನು ರವಾನಿಸಲಾಗಿದೆ ಈ ಪೈಕಿ ರಿಸರ್ವ್ ಪೊಲೀಸ್ ಫೋರ್ಸ್ (CRPF) ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ನಿಂದ ಮತ್ತು ಸಶಸ್ತ್ರ ಸೀಮಾ ಬಲ್ (SSB) ಗಳಿಂದ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಪೊಲೀಸ್ ಅಧಿಕಾರಿಗಳು ಜನತೆಗೆ ಮನವಿ ಮಾಡಿದ್ದಾರೆ. ಹಿಂಸಾಚಾರ ಘಟನೆಯಲ್ಲಿ ನಳಂದದ ಬಿಹಾರ್ ಶರೀಫ್ ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


