ಇಸ್ರೋದ ಅತ್ಯಂತ ಭಾರದ ರಾಕೆಟ್ ಉಡಾವಣೆ ಯಶಸ್ವಿ; 36 ರಾಕೆಟ್ ಗಳೊಂದಿಗೆ ನಭಕ್ಕೆ ಚಿಮ್ಮಿದ GSLV MkIII
ಇಸ್ರೋ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ (GSLV MkIII) ಉಡಾವಣೆ ಅ.22 ರಂದು ಉಡಾವಣೆಯಾಗಿದ್ದು, ಉಡಾವಣೆ ಯಶಸ್ವಿಯಾಗಿದೆ.

ಶ್ರೀಹರಿಕೋಟಾ: ಇಸ್ರೋ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ (GSLV MkIII) ಉಡಾವಣೆ ಅ.22 ರಂದು ಉಡಾವಣೆಯಾಗಿದ್ದು, ಉಡಾವಣೆ ಯಶಸ್ವಿಯಾಗಿದೆ.
LVM3-M2 ನಲ್ಲಿ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆ ಇದಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇತಿಹಾಸ ನಿರ್ಮಿಸಿದೆ.
ಕಡಿಮೆ ಭೂಮಿಯ ಕಕ್ಷೆಗೆ ಈ ಉಪಗ್ರಹಗಳನ್ನು ಸೇರಿಸಲಾಗಿದ್ದು, ಬ್ರಿಟನ್ ಮೂಲದ ಗ್ರಾಹಕರಿಗೆ ಈ ಸೇವೆಯನ್ನು ಒದಗಿಸಲಾಗಿದೆ.
ಇಸ್ರೋದ ಎಲ್ ವಿಎಂ3 ನಲ್ಲಿ ಒನ್ ವೆಬ್ ಲಿಯೋ ಉಪಗ್ರಹಗಳ ಉಡಾವಣೆಗೆ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಲಂಡನ್ ಕೇಂದ್ರಿತ ನೆಟ್ವರ್ಕ್ ಆಕ್ಸಿಸ್ ಅಸೋಸಿಯೇಟೆಡ್ ಲಿಮಿಟೆಡ್ (ಒನ್ ವೆಬ್) ನೊಂದಿಗೆ ಉಪಗ್ರಹ ಉಡಾವಣೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿತ್ತು.
ಒನ್ ವೆಬ್ ಖಾಸಗಿ ಸ್ಯಾಟಲೈಟ್ ಸಂವಹನ ಸಂಸ್ಥೆಯಾಗಿದ್ದು, ಭಾರತದ ಭಾರ್ತಿ ಎಂಟರ್ ಪ್ರೈಸಸ್ ಈ ಸಂಸ್ಥೆಯಲ್ಲಿ ಪ್ರಮುಖ ಹೂಡಿಕೆದಾರ ಹಾಗೂ ಷೇರು ಹೊಂದಿರುವ ಸಂಸ್ಥೆಯಾಗಿದೆ. 5,796 ಕೆಜಿಯಷ್ಟು ಭಾರವಾದ ಪೇಲೋಡ್‌ನೊಂದಿಗೆ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


