ದೇಶ

ಮಧ್ಯ ಪ್ರದೇಶ: ಪತ್ನಿ ಕೊಲ್ಲಲೆಂದು ಸಂಚು ರೂಪಿಸಿದ್ದ ಪತಿ; ಬಲಿಯಾಗಿದ್ದು ಅತ್ತೆ!

ಪತ್ನಿಯನ್ನು ಸಾಯಿಸುವ ದುರುದ್ದೇಶದಿಂದ ಕಬ್ಬಿಣದ ಬಾಗಿಲಿಗೆ ಜೋಡಿಸಿಟ್ಟಿದ್ದ ವೈರ್‌ನಿಂದ ಅತ್ತೆಯ ಮೇಲೆ ವಿದ್ಯುತ್‌ ಪ್ರವಹಿಸಿ ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಬೆಟುಲ್‌ನಲ್ಲಿ ನಡೆದಿದೆ.

ಮಧ್ಯ ಪ್ರದೇಶ: ಪತ್ನಿ ಕೊಲ್ಲಲೆಂದು ಸಂಚು ರೂಪಿಸಿದ್ದ ಪತಿ; ಬಲಿಯಾಗಿದ್ದು ಅತ್ತೆ!
ಸಾಂದರ್ಭಿಕ ಚಿತ್ರ
Published On :

ಬೆಟುಲ್‌: ಪತ್ನಿಯನ್ನು ಸಾಯಿಸುವ ದುರುದ್ದೇಶದಿಂದ ಕಬ್ಬಿಣದ ಬಾಗಿಲಿಗೆ ಜೋಡಿಸಿಟ್ಟಿದ್ದ ವೈರ್‌ನಿಂದ ಅತ್ತೆಯ ಮೇಲೆ ವಿದ್ಯುತ್‌ ಪ್ರವಹಿಸಿ ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಬೆಟುಲ್‌ನಲ್ಲಿ ನಡೆದಿದೆ.

ಮಧ್ಯಪ್ರದೇಶದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೈಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ವಿಪರೀತ ಮದ್ಯಪಾನ ಮಾಡುತ್ತಿದ್ದ ಪತಿ ದಿನಂಪ್ರತಿ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ ಅಲ್ಲದೆ, ತನ್ನ ಪತಿಯನ್ನು ಮದ್ಯಪಾನದ ಚಟದಿಂದ ಬಿಡಿಸಬೇಕೆಂದು ಪ್ರಯತ್ನ ನಡೆಸಿದ್ದಾಳೆ, ಆದರೆ ದಂಪತಿಗಳ ನಡುವೆ ಭಾನುವಾರವೂ ಕಲಹ ನಡೆದಿದೆ, ಇದರಿಂದ ಮನನೊಂದ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಳೆ.

ಪತ್ನಿ ತನ್ನನ್ನು ಬಿಟ್ಟು ತಾಯಿ ಮನೆಗೆ ಹೋದ ವಿಚಾರದಲ್ಲಿ ಸಿಟ್ಟಿಗೆದ್ದ ಪತಿರಾಯ ಪತ್ನಿಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಸಂಚು ರೂಪಿಸಿದ, ಅದರಂತೆ ಪತಿ, ತನ್ನ ಪತ್ನಿಯ ತಾಯಿ ಮನೆಗೆ ಹೋಗಿದ್ದಾನೆ.

ಈ ವೇಳೆ ಅಲ್ಲಿ ಕಬ್ಬಿಣದ ಬಾಗಿಲನ್ನು ಗಮನಿಸಿದ್ದಾನೆ ಇದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟು ಪತ್ನಿಯನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಬಾಗಿಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಏನೂ ಗೊತ್ತಿಲದವರಂತೆ ಹೊರಗೆ ಬಂದು ಕುಳಿತಿದ್ದಾನೆ. ಆದರೆ ದುರದೃಷ್ಟವಶಾತ್ ಪತ್ನಿ ಹೋಗುವ ಬದಲಿಗೆ ಅತ್ತೆ ಆ ಬಾಗಿಲನ್ನು ಸ್ಪರ್ಶಿಸಿದ್ದಾರೆ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.