ಮಧ್ಯಪ್ರದೇಶ: ನವರಾತ್ರಿ ಆಚರಣೆ ವೇಳೆ ದೊಣ್ಣೆ ಹಿಡಿದು ಎರಡು ಸಮುದಾಯಗಳಿಂದ ಭಾರೀ ಹೊಡೆದಾಟ!
ನವರಾತ್ರಿ ಆಚರಣೆಯ ಕುರಿತು ಮಧ್ಯಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಕೋಲುಗಳಿಂದ ಹೊಡೆದಾಟ ನಡೆದಿದ್ದು, ಗಲಾಟೆ ವಿಡಿಯೋ ವೈರಲ್ ಆಗಿದೆ.

ಭೋಪಾಲ್: ನವರಾತ್ರಿ ಆಚರಣೆಯ ಕುರಿತು ಮಧ್ಯಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಕೋಲುಗಳಿಂದ ಹೊಡೆದಾಟ ನಡೆದಿದ್ದು, ಗಲಾಟೆ ವಿಡಿಯೋ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಭೋಪಾಲ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಅಗರ್ ಜಿಲ್ಲೆಯ ಕಂಕರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದ ಕಾರಣಕ್ಕೆ ಮೇಲ್ಜಾತಿಯವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮದ ದಲಿತ ಸಮುದಾಯದ ಸದಸ್ಯರು ಹೇಳುತ್ತಾರೆ.
ಗರ್ಭಾ ಫಂಕ್ಷನ್‌ಗಾಗಿ ಇಬ್ಬರು ಹುಡುಗಿಯರು ಮಾಡಿದ ಅಶ್ಲೀಲ ನೃತ್ಯದ ಬಗ್ಗೆ ಜಗಳ ಆರಂಭವಾಯಿತು ಎಂದು ಇನ್ನೊಂದು ಕಡೆ ಆರೋಪ ಕೇಳಿಬರುತ್ತಿದೆ.
ಒಂದು ಹಾಡು-ನೃತ್ಯ ಕಾರ್ಯಕ್ರಮದ ಬಗೆಗಿನ ವಿವಾದವು ಜಗಳಕ್ಕೆ ಕಾರಣವಾಯಿತು. ನಾವು ಎರಡೂ ಕಡೆಯಿಂದ ದೂರುಗಳನ್ನು ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನವಲ್ ಸಿಂಗ್ ಸಿಸೋಡಿಯಾ ಹೇಳಿದ್ದಾರೆ.
ವ್ಯಾಪಕವಾಗಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ ಗಲಾಟೆ ವೇಳೆ ದೊಡ್ಡ ದೊಡ್ಡ ಕೋಲುಗಳನ್ನು ಬಳಸಲಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


