ಜಾರ್ಖಂಡ್: ಮಾವೋವಾದಿಗಳು ಇಟ್ಟಿದ್ದ 120 ಸುಧಾರಿತ ಸ್ಫೋಟಗಳ ನಿಷ್ರ್ಕಿಯ
ಮಾವೋವಾದಿ ನಿಗ್ರಹ ಕಾರ್ಯಾಚರಣೆಯ ವೇಳೆ ಅವರು ಅಡಗಿಸಿಟ್ಟಿದ್ದ 120 ಸುಧಾರಿತ ಸ್ಫೋಟಕಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಜಾರ್ಖಂಡ್: ಮಾವೋವಾದಿ ನಿಗ್ರಹ ಕಾರ್ಯಾಚರಣೆಯ ವೇಳೆ ಅವರು ಅಡಗಿಸಿಟ್ಟಿದ್ದ 120 ಸುಧಾರಿತ ಸ್ಫೋಟಕಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಜಾರ್ಖಂಡ್ ನ ಲತೇಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಪಡೆಗಳನ್ನು ಟಾರ್ಗೆಟ್ ಮಾಡಿ ಈ ಸುಧಾರಿತ ಸ್ಫೋಟಕಗಳನ್ನು ಇರಿಸಲಾಗಿತ್ತು.
ಬುದಪಾಹದ್ ಎಂಬ ಪ್ರದೇಶದಲ್ಲಿ ಈ ಐಇಡಿಗಳು ಪತ್ತೆಯಾಗಿದ್ದು ಈ ಪ್ರದೇಶ ಈ ಹಿಂದೆ ಮಾವೋವಾದಿಗಳ ಭದ್ರಕೋಟೆಯಾಗಿತ್ತು. ಈಗ ಭದ್ರತಾ ಪಡೆಗಳು ಈ ಭಾಗದಲ್ಲಿ ಕ್ಯಾಂಪ್ ಮಾಡಿರುವುದರಿಂದ ಮಾವೋವಾದಿಗಳ ಉಪಟಳ ಕಡಿಮೆಯಾಗಿದೆ.
ಇದಕ್ಕೂ ಮುನ್ನ ಭದ್ರತಾಪಡೆಗಳು ಗುರುವಾರದಂದು 15 ಕೆ.ಜಿ ಕುಕ್ಕರ್ ಬಾಂಬ್, ಮೂರು ಡಿಟೋನೇಟರ್ ಗಳನ್ನು ಹಾಗೂ ಮೋಟ್ರೋಲಾ ವೈರ್ ಲೆಸ್ ಸೆಟ್ ನ್ನು ವಶಕ್ಕೆ ಪಡೆದಿದ್ದವು.
ಈ ಭಾಗದ ಮಾವೋವಾದಿ ನಾಯಕ ಮಿಸಿರ್ ಬೆಸ್ರಾ ಅಲಿಯಾಸ್ ಸಾಗರ್ ಅವರನ್ನು ಹುಡುಕಿ ಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಇನ್ನು ಕೊಲ್ಹನ್ ನಲ್ಲಿ ಭದ್ರತಾ ಪಡೆಗಳು 16 ಐಇಡಿ ಹಾಗೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪತ್ತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


