ಅಸ್ಸಾಂ: ಅಪ್ರಾಪ್ತ ಮಗಳ ಬಾಯ್ ಫ್ರೆಂಡ್ ಕಿವಿ ಕತ್ತರಿಸಿ ತಾಲಿಬಾನ್ ರೀತಿ ಶಿಕ್ಷೆ ನೀಡಿದ ಅಪ್ಪ!
ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗಳೊಂದಿಗೆ ಸಂಬಂಧ ಹೊಂದಿದ್ದ ಹುಡುಗನನ್ನು ಕಟ್ಟಿಹಾಕಿ ಥಳಿಸಿ, ಆತನ ಕಿವಿಗಳನ್ನು ಕತ್ತರಿಸಿದ ಅಮಾನವೀಯ ಘಟನೆ ಸೋಮವಾರ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ.

ಗುವಾಹಟಿ: ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗಳೊಂದಿಗೆ ಸಂಬಂಧ ಹೊಂದಿದ್ದ ಹುಡುಗನನ್ನು ಕಟ್ಟಿಹಾಕಿ ಥಳಿಸಿ, ಆತನ ಕಿವಿಗಳನ್ನು ಕತ್ತರಿಸಿದ ಅಮಾನವೀಯ ಘಟನೆ ಸೋಮವಾರ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ.
ತಾಲಿಬಾನ್ ಮಾದರಿಯಲ್ಲಿ ಶಿಕ್ಷೆ ನೀಡಿದ ವ್ಯಕ್ತಿಯನ್ನು ಚಿತ್ರ ಗೊಗೊಯ್ ಎಂದು ಗುರುತಿಸಲಾಗಿದ್ದು, ಯುವಕನಿಗೆ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಮಂಗಳವಾರ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಮಗಳ ಮಲಗುವ ಕೋಣೆಯಲ್ಲಿ ಹುಡುಗನನ್ನು ಕಂಡು ಆಕ್ರೋಶಗೊಂಡ ಗೊಗೊಯ್, ಆತನನ್ನು ನಿರ್ದಯವಾಗಿ ಥಳಿಸಿದ್ದಾನೆ. ಬಳಿಕ ಆತನ ಎರಡೂ ಕೈಗಳು ಮತ್ತು ಕಾಲುಗಳನ್ನು ಕಟ್ಟಿಹಾಕಿ ಥಳಿಸಿದ್ದಾನೆ. ಅಲ್ಲದೆ ಯುವಕನ ಕಿವಿಗಳನ್ನು ಕೈಗೆ ಸಿಕ್ಕಿದ ಆಯುಧದಿಂದ ಕತ್ತರಿಸಲು ಪ್ರಯತ್ನಿಸಿದ್ದಾನೆ. ಕಟ್ಟಿ ಹಾಕಿದ್ದ ಕಾರಣ, ಯುವಕನಿಗೆ ತಪ್ಪಿಸಿಕೊಳ್ಳಲು ಆಗಿಲ್ಲ. ಆದರೂ ಹುಡುಗನ ಕಿವಿಗಳನ್ನು ಸಂಪೂರ್ಣವಾಗಿ ಕತ್ತರಿಸಲು ಆಗಿಲ್ಲ.
ಘಟನೆಯಿಂದ ಯುಕನಿಗೆ ಗಂಭೀರವಾದ ಗಾಯಗಳಾಗಿವೆ. ಎರಡೂ ಕಿವಿಗಳನ್ನು ಅರ್ಧ ಕತ್ತರಿಸಲಾಗಿದ್ದು, ತೀವ್ರ ಪ್ರಮಾಣದ ರಕ್ತಸ್ರಾವವಾಗಿದೆ ಎಂದು ಟಿನ್ಸುಕಿಯಾ ಪೊಲೀಸ್ ಅಧೀಕ್ಷಕ ದೇಬಜಿತ್ ದೆಯುರಿ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಬೋರ್ಡುಮ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಮಲುಗುರಿ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


