ಬೆದರಿಕೆ ಬರುತ್ತಿವೆ; ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನೂಪುರ್ ಶರ್ಮಾ
ಸುಪ್ರೀಂ ಕೋರ್ಟ್ ನ ಬಲವಾದ ಟೀಕೆ ನಂತರ ಬೆದರಿಕೆಗಳು ಬರುತ್ತಿವೆಯೆಂದು ಉಲ್ಲೇಖಿಸಿ, ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ನವದೆಹಲಿ: ಸುಪ್ರೀಂ ಕೋರ್ಟ್ ನ ಬಲವಾದ ಟೀಕೆ ನಂತರ ಬೆದರಿಕೆಗಳು ಬರುತ್ತಿವೆಯೆಂದು ಉಲ್ಲೇಖಿಸಿ, ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ತನ್ನ ಸಂಭವನೀಯ ಬಂಧನವನ್ನು ತಡೆಯಲು ಮತ್ತು ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಅವರ ಕಾಮೆಂಟ್ಗಳ ಕುರಿತು ಭಾರತದಾದ್ಯಂತ ದಾಖಲಾಗಿರುವ ಒಂಬತ್ತು ಪ್ರಕರಣಗಳನ್ನು ಒಟ್ಟುಗೂಡಿಸಲು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಸುಮಾರು ಎರಡು ತಿಂಗಳ ಹಿಂದೆ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಅವರು ಮಾಡಿದ ಕಾಮೆಂಟ್ ಭಾರತದಲ್ಲಿ ಪ್ರತಿಭಟನೆಯ ಜೊತೆಗೆ ರಾಜತಾಂತ್ರಿಕ ಗದ್ದಲಕ್ಕೆ ಕಾರಣವಾಯಿತು. ನಂತರ ಬಿಜೆಪಿ ಅವರನ್ನು ಅಮಾನತು ಮಾಡಿತು. ಇದುವರೆಗೆ ನೂಪುರ್ ಶರ್ಮಾರನ್ನು ಬೆಂಬಲಿಸಿದ ಆರೋಪದ ಮೇಲೆ ಇಬ್ಬರನ್ನು ಹತ್ಯೆ ಮಾಡಲಾಗಿದೆ.
ನೂಪುರ್ ಶರ್ಮಾರ ಹಿಂದಿನ ಮನವಿಯಲ್ಲಿ, ದೆಹಲಿಯಲ್ಲಿನ ಎಫ್ಐಆರ್ನೊಂದಿಗೆ ಎಲ್ಲಾ ಇತರ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ಗೆ ವಿನಂತಿಸಿದ್ದರು. ಆದರೆ ನ್ಯಾಯಾಲಯವು ಅವರ ವಿರುದ್ಧ ಕಟುವಾಗಿ ಟೀಕಿಸಿತ್ತು. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಅವರೇ ಜವಾಬ್ದಾರರು ಎಂದಿತ್ತು.
ಇಂದಿನ ಹೊಸ ಮನವಿಯನ್ನು ಕೋರ್ಟ್ ಇನ್ನೂ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ. ಅಂದಿನಿಂದ ತನಗೆ ಅತ್ಯಾಚಾರ ಮತ್ತು ಸಾವಿನ ಬೆದರಿಕೆಗಳು ಬರುತ್ತವೆ ಎಂದು ಹೊಸ ಮನವಿಯಲ್ಲಿ ತಿಳಿಸಿದ್ದಾರೆ. ಹಿಂದಿನ ಮನವಿಯಲ್ಲೂ ಬೆದರಿಕೆಗಳನ್ನು ಉಲ್ಲೇಖಿಸಿದ್ದರು. ಆದರೆ ನ್ಯಾಯಾಧೀಶರು ನೂಪುರ್ ಶರ್ಮಾ ಅವರ ನಾಲಗೆ ಸಡಿಲಗೊಂಡಿರುವುದು ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ ಮತ್ತು ಅವರ ಹೇಳಿಕೆಗಳು ಅಗ್ಗದ ಪ್ರಚಾರ, ರಾಜಕೀಯ ಅಜೆಂಡಾ ಅಥವಾ ಕೆಲವು ನೀಚ ಚಟುವಟಿಕೆಗಳಿಗಾಗಿ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


