ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಪತ್ನಿ ಸಾಧನಾ ಗುಪ್ತಾ ನಿಧನ
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಇಂದು ಮಧ್ಯಾಹ್ನ ನಿಧನರಾದರು. ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಇಂದು ಮಧ್ಯಾಹ್ನ ನಿಧನರಾದರು. ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮುನ್ನ ಇಂದು ಪತಿ ಮುಲಾಯಂ ಸಿಂಗ್ ಕೂಡ ಅವರನ್ನು ಭೇಟಿಯಾಗಿದ್ದರು. ಸಾಧನಾ ಗುಪ್ತಾ ಅವರು, ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರ ಅತ್ತೆ ಮತ್ತು ಪ್ರತೀಕ್ ಯಾದವ್ ಅವರ ತಾಯಿ.
2003ರಲ್ಲಿ ಮುಲಾಯಂ ಸಿಂಗ್ ಅವರ ಮೊದಲ ಪತ್ನಿ ಮತ್ತು ಅಖಿಲೇಶ್ ಯಾದವ್ ಅವರ ತಾಯಿ ಮಾಲ್ತಿ ದೇವಿ ಅವರು ನಿಧನರಾದರು. ಕೆಲವು ದಿನಗಳ ಬಳಿಕ ಎಸ್ಪಿ ನಾಯಕ ತನಗಿಂತ 20 ವರ್ಷ ಚಿಕ್ಕವಳಾದ ಸಾಧನಾ ಗುಪ್ತಾಗೆ ಎರಡನೇ ಹೆಂಡತಿಯ ಸ್ಥಾನಮಾನವನ್ನು ನೀಡಿದ್ದರು.
ಸಾಧನಾ ಗುಪ್ತಾ ಅವರು ಉತ್ತರ ಪ್ರದೇಶದ ಇಟಾವಾಹ್ನ ಬಿದುನಾ ತೆಹಸಿಲ್ನ ನಿವಾಸಿ. 4 ಜುಲೈ 1986ರಂದು ಅವರು ಫರೂಕಾಬಾದ್ನ ಚಂದ್ರಪ್ರಕಾಶ್ ಗುಪ್ತಾ ಅವರನ್ನು ವಿವಾಹವಾದರು. ಅವರ ಮದುವೆಯ ನಂತರ, ಪ್ರತೀಕ್ ಯಾದವ್ 7 ಜುಲೈ 1987ರಂದು ಜನಿಸಿದರು. ಸಾಧನಾ ಮತ್ತು ಚಂದ್ರಪ್ರಕಾಶ್ ಎರಡು ವರ್ಷಗಳ ನಂತರ ಬೇರ್ಪಟ್ಟರು. ಇದಾದ ನಂತರ ಸಾಧನಾ ಗುಪ್ತಾ ಅವರು ಆಗಿನ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸಂಪರ್ಕಕ್ಕೆ ಬಂದಿದ್ದರು.
ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ತಾಯಿ ಮೂರ್ತಿದೇವಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ, ನರ್ಸಿಂಗ್ ತರಬೇತಿಯನ್ನು ಮಾಡುತ್ತಿದ್ದ ಸಾಧನಾ ಗುಪ್ತಾ ಅವರು ಲಖನೌದಲ್ಲಿನ ನರ್ಸಿಂಗ್ ಹೋಂನಲ್ಲಿ ಮತ್ತು ನಂತರ ಸೈಫಾಯಿ ವೈದ್ಯಕೀಯ ಕಾಲೇಜಿನಲ್ಲಿ ಮೂರ್ತಿದೇವಿಯನ್ನು ಬಹಳ ಕಾಳಜಿ ವಹಿಸಿ ನೋಡಿಕೊಂಡಿದ್ದರು. ಅಂದಿನಿಂದ ಮುಲಾಯಂ ಮತ್ತು ಸಾಧನಾ ಪರಸ್ಪರ ಹತ್ತಿರವಾಗಿದ್ದರು ಎಂದು ಹೇಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


