ಗಡಿಯಲ್ಲಿ ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸುವ ಬಿಎಸ್‌ಎಫ್ 'ಹಿಟ್' ತಂಡಗಳಿಗೆ 1 ಲಕ್ಷ ಬಹುಮಾನ!
ಗಡಿಯಲ್ಲಿ ಡ್ರೋನ್ ಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ. ಇದನ್ನು ತಡೆಗಟ್ಟಲು ಬಿಎಸ್ಎಫ್ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ನವದೆಹಲಿ: ಗಡಿಯಲ್ಲಿ ಡ್ರೋನ್ ಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ. ಇದನ್ನು ತಡೆಗಟ್ಟಲು ಬಿಎಸ್ಎಫ್ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.
ಅದರಂತೆ ಡ್ರೋನ್ ಗಳನ್ನು ಹೊಡೆದುರುಳಿಸುವ ತಂಡಕ್ಕೆ 1 ಲಕ್ಷ ರೂಪಾಯಿ ನಗದು ಬಹುಮಾನ, ಜಾಮರ್‌ಗಳು ಮತ್ತು ಸ್ಪೂಫರ್‌ಗಳನ್ನು ನೀಡಲಿದೆ. ಪಾಕಿಸ್ತಾನದ ಗಡಿಯೂದ್ದಕ್ಕೂ ಸುಸಜ್ಜಿತವಾದ ಬೇಲಿ ಇದ್ದರೂ ಡ್ರೋನ್ ದಾಳಿಗೆ ಸಾಕ್ಷಿಯಾಗಿದೆ. ಇನ್ನು ಪಂಜಾಬ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ರೋನ್ ಹಾವಳಿ ಹೆಚ್ಚಾಗಿದೆ.
ರೈಫಲ್ ಫೈರಿಂಗ್ ಅಥವಾ ಜ್ಯಾಮಿಂಗ್ ತಂತ್ರಜ್ಞಾನದ ಮೂಲಕ ಡ್ರೋನ್ ಅನ್ನು ಉರುಳಿಸುವ ಗಡಿಯಲ್ಲಿನ ಪ್ರತಿ ಬಿಎಸ್‌ಎಫ್ 'ಹಿಟ್' ತಂಡಕ್ಕೆ 1 ಲಕ್ಷ ರೂಪಾಯಿ ನಗದು ಪ್ರೋತ್ಸಾಹಕವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಈ ಮೂಲಕ ಡ್ರೋನ್‌ಗಳ ಹಾವಳಿಯ ವಿರುದ್ಧ ಹೋರಾಡಲಾಗುತ್ತಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಜಾನ ಜಲಂಧರ್ ಗಡಿಯಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯಲು ಡ್ರೋನ್‌ಗಳನ್ನು ಬಳಸುವ ಅಂಶಗಳ ಬಗ್ಗೆ ಬಿಎಸ್‌ಎಫ್‌ಗೆ ತಿಳಿಸುವ ಸ್ಥಳೀಯರು ಅಥವಾ ಸಾರ್ವಜನಿಕರಿಗೆ ಇದೇ ರೀತಿಯ ಬಹುಮಾನವನ್ನುಏಪ್ರಿಲ್‌ನಲ್ಲಿ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದರು.
ಈ ವರ್ಷ ಡಿಸೆಂಬರ್ 25ರವರೆಗೆ BSF 22 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಇಲ್ಲಿಯವರೆಗೆ ನಿಯೋಜಿಸಲಾದ ಒಂದು ಡಜನ್‌ಗಿಂತಲೂ ಹೆಚ್ಚು 'ಹಿಟ್' ಅಥವಾ ಶೂಟಿಂಗ್ ತಂಡಗಳಿಗೆ ತಲಾ 1 ಲಕ್ಷ ರೂ.ಗಳ ಬಹುಮಾನವನ್ನು ಹಸ್ತಾಂತರಿಸಲಾಗಿದೆ ಎಂದರು.
ಈ ವರ್ಷ ಎಲ್ಲಾ 22 ಡ್ರೋನ್ ಹೊಡೆದುರುಳಿಸುವ ಪ್ರಕರಣಗಳು ಪಂಜಾಬ್ ಗಡಿಯಲ್ಲಿ ನಡೆದಿವೆ. 2020 ಮತ್ತು 2021ರಲ್ಲಿ ಪಂಜಾಬ್ ಮತ್ತು ಜಮ್ಮುವಿನಲ್ಲಿ ತಲಾ ಒಂದು ಡಜನ್ ಡ್ರೋನ್ ಗಳನ್ನು ಬಿಎಸ್‌ಎಫ್ ಹೊಡೆದುರುಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


