ಪೋಷಕರೊಂದಿಗೆ ಸಮಯ ಕಳೆಯಲು ಸರ್ಕಾರಿ ನೌಕರರಿಗೆ ವಿಶೇಷ ಸಿಎಲ್ ಅನುಮೋದಿಸಿದ ಅಸ್ಸಾಂ ಸರ್ಕಾರ
ಸತತ 2ನೇ ವರ್ಷ ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಪೋಷಕರೊಂದಿಗೆ ಸಮಯ ಕಳೆಯುವುದಕ್ಕಾಗಿ ವಿಶೇಷ ಸಿಎಲ್ ನ್ನು ಅನುಮೋದಿಸಿದೆ.

ಅಸ್ಸಾಂ: ಸತತ 2ನೇ ವರ್ಷ ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಪೋಷಕರೊಂದಿಗೆ ಸಮಯ ಕಳೆಯುವುದಕ್ಕಾಗಿ ವಿಶೇಷ ಸಿಎಲ್ ನ್ನು ಅನುಮೋದಿಸಿದೆ.
ಮುಂದಿನ ವರ್ಷ ಫೆ.09 ಹಾಗೂ 10 ರಂದು ಉದ್ಯೋಗಿಗಳು ವಿಶೇಷ ರಜೆಯನ್ನು ಪಡೆಯಬಹುದಾಗಿದೆ.
ವಿಶೇಷ ರಜೆಗಳನ್ನು ನಿಯಮಿತ ರಜಾದಿನಗಳಾದ ಎರಡನೇ ಶನಿವಾರ ಮತ್ತು ಭಾನುವಾರಗಳ ಜೊತೆಗೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದಾಗಿ ಉದ್ಯೋಗಿಗಳಿಗೆ ತಮ್ಮ ಪೋಷಕರೊಂದಿಗೆ ಸಮಯ ಕಳೆಯುವುದಕ್ಕೆ ನಾಲ್ಕು ದಿನಗಳು ಲಭ್ಯವಾಗಲಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಿದೆ.
ರಜೆ ಸೌಲಭ್ಯಗಳ ವಿವರಗಳನ್ನು ವಿಶೇಷ ವೆಬ್ ಪೋರ್ಟಲ್ ಮೂಲಕ ತಿಳಿಸಲಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. 2021 ರ ಸ್ವಾತಂತ್ರ್ಯ ದಿನದಂದು ಸಿಎಂ ಹಿಮಂತ ಬಿಸ್ವ ಶರ್ಮ ವಿಶೇಷ ರಜೆ ಸೌಲಭ್ಯವನ್ನು ಘೋಷಿಸಿದ್ದರು.
ಈ ರೀತಿಯ ಮೊದಲ ರಜೆಯನ್ನು ಈ ವರ್ಷ ಜ.06 ಹಾಗೂ 07 ರಂದು ನೀಡಲಾಗಿತ್ತು. ಸಿಎಂ, ಮುಖ್ಯಕಾರ್ಯದರ್ಶಿ, ಡಿಜಿಪಿ ಹೊರತುಪಡಿಸಿದರೆ, ಸಚಿವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರೂ ಈ ರೀತಿಯ ಸೌಲಭ್ಯವನ್ನು ಪಡೆಯಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


