ದೇಶ

ಸೈಬರ್ ಅಪರಾಧ ತಡೆಗೆ ಟಾಫ್ ಕಾಪ್ ತಂತ್ರಜ್ಞಾನ ಜಾರಿ

ಟೆಲಿಕಾಂ ಉದ್ಯಮ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸೈಬರ್ ಅಪರಾಧಗಳು ಸಹ ಅದೇ ವೇಗದಲ್ಲಿ ದಾಖಲಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ.

ಸೈಬರ್ ಅಪರಾಧ ತಡೆಗೆ ಟಾಫ್ ಕಾಪ್ ತಂತ್ರಜ್ಞಾನ ಜಾರಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಟೆಲಿಕಾಂ ಉದ್ಯಮ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸೈಬರ್ ಅಪರಾಧಗಳು ಸಹ ಅದೇ ವೇಗದಲ್ಲಿ ದಾಖಲಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ. ಇದರ ನಿಯಂತ್ರಣಕ್ಕಾಗಿ ಶೀಘ್ರದಲ್ಲಿ 'ಟಾಫ್ ಕಾಪ್' ವಿನೂತನ ತಂತ್ರಜ್ಞಾನ ಜಾರಿಗೊಳಿಸಲಾಗುವುದೆಂದು ಕೆಂದ್ರ ದೂರಸಂಪರ್ಕ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಕೆ. ರಾಜಾರಾಮನ್ ಹೇಳಿದರು.

ದೂರಸಂಪರ್ಕ ಸುರಕ್ಷತೆ ಕುರಿತು ಬೆಂಗಳೂರಿನಲ್ಲಿ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಟೆಲಿಕಾಂ ಉದ್ಯಮ ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆದು ಅದರ ಲಾಭ ಜಗತ್ತಿನ ಎಲ್ಲ ನಾಗರಿಕರಿಗೆ ವಿಫುಲವಾಗಿ ದೊರೆಯುತ್ತಿದೆ. ಇದು ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯ ಕುರುಹು ಆಗಿದೆ. ಆದರೆ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಇದೇ ತಂತ್ರಜ್ಞಾನದ ದುರುಪಯೋಗವೂ ನಡೆಯುತ್ತಿರುವುದು ಆಂತಕಕಾರಿಯಾಗಿದೆ ಎಂದರು.

ತಂತ್ರಜ್ಞಾನ ಬಳಿಸಿಕೊಂಡು ಸೈಬರ್ ಅಪರಾಧ ಪ್ರಕರಣಗಳು ನಿತ್ಯವೂ ದೊಡ್ಡ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಇದರಿಂದ ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ದೂರಸಂಪರ್ಕ ಇಲಾಖೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಸೈಬರ್ ಅಪರಾಧಗಳನ್ನು ಮಟ್ಟಹಾಕಲು ಹಾಗೂ ನಾಗರಿಕರಿಗೆ ಸುರಕ್ಷತೆಗಳನ್ನು ಸ್ಥಿರೀಕರಣಗೊಳಿಸಲು “ಟಾಫ್ಕಾಪ್” ಎಂಬ ವಿನೂತನ ತಂತ್ರಜ್ಞಾನ ಆಧಾರಿತ ಉಪಕ್ರಮವನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು. ತನ್ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ನಾಗರಿಕರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಈ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ ಹಾಗೂ ಕಾನೂನು ಜಾರಿ ಅಧಿಕಾರಿಗಳ ಮಧ್ಯೆ ಸಹಕಾರ ಹಾಗೂ ಸಮನ್ವಯತೆ ಸಾಧಿಸಲಾಗುವುದು.

ಇಂತಹ ಕಾರ್ಯಾಗಾರಗಳು ಇಲಾಖೆಯ ಅಧಿಕಾರಿಗಳ ದಕ್ಷತೆ ಹಾಗೂ ನೈಪುಣ್ಯತೆ ಹೆಚ್ಚಿಸಲು ಸಹಕಾರಿಯಾಗಲಿದ್ದು, ಸುರಕ್ಷತೆ ಕುರಿತು ಚರ್ಚೆ ನಡೆಸಿ ಹೊಸ ಆವಿಷ್ಕಾರಗಳತ್ತ ಮುಖಮಾಡಲು ಅನುಕೂಲವಾಗಲಿವೆ ಎಂದು ರಾಜಾರಾಮನ್ ವಿಶ್ವಾಸ ವ್ಯಕ್ತಪಡಿಸಿದರು.

ದೂರಸಂಪರ್ಕ ಇಲಾಖೆಯ ಮಹಾನಿರ್ದೇಶಕ ಸುಭಾಷಚಂದ್, ಹಿರಿಯ ಉಪಮಹಾನಿರ್ದೇಶಕಿ ರಜನಿ ತನೇಜಾ, ಕರ್ನಾಟಕ ದೂರಸಂಪರ್ಕ ಇಲಾಖೆಯ ಹಿರಿಯ ಉಪಮಹಾನಿರ್ದೇಶಕ ರಾಕೇಶ್ಕುಮಾರ ದುಬೆ, ಮುಂತಾದವರು ಉಪಸ್ಥಿತರಿದ್ದರು.

ಗೃಹ ಇಲಾಖೆಯ – ಅಧಿಕಾರಿಗಳು, ಟೆಲಿಕಾಂ ಉದ್ಯಮದ ದಿಗ್ಗಜರು, ಖಾಸಗಿ ಟೆಲಿಕಾಂ, ಇಂಟರ್ನೆಟ್ ಕ್ಷೇತ್ರದ ಪ್ರಮುಖರು ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ಕೇರಳ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.