ದೇಶ

ಒಡಿಶಾ: ಕಲ್ಲಿದ್ದಲು ತುಂಬಿದ ಟ್ರಕ್ -ಖಾಸಗಿ ಬಸ್ ಡಿಕ್ಕಿ; ಆರು ಮಂದಿ ಸಾವು, 20 ಜನರಿಗೆ ಗಾಯ

ಒಡಿಶಾದ ಝಾರ್ಸುಗುಡದಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಹಾಗೂ ಖಾಸಗಿ ಕಂಪನಿಯೊಂದರ ನೌಕರರನ್ನು ಹೊತ್ತೊಯ್ಯುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಒಡಿಶಾ: ಕಲ್ಲಿದ್ದಲು ತುಂಬಿದ ಟ್ರಕ್ -ಖಾಸಗಿ ಬಸ್ ಡಿಕ್ಕಿ; ಆರು ಮಂದಿ ಸಾವು, 20 ಜನರಿಗೆ ಗಾಯ
ಬಸ್ ಗೆ ಟ್ರಕ್ ಡಿಕ್ಕಿ
Published On :

ಭುವನೇಶ್ವರ: ಒಡಿಶಾದ ಝಾರ್ಸುಗುಡದಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಹಾಗೂ ಖಾಸಗಿ ಕಂಪನಿಯೊಂದರ ನೌಕರರನ್ನು ಹೊತ್ತೊಯ್ಯುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಸಂಬಲ್‍ಪುರ-ಜಾರ್ಸುಗುಡ ಬಿಜು ಎಕ್ಸ್‌ಪ್ರೆಸ್‍ವೇನಲ್ಲಿ ಈ ಘಟನೆ ನಡೆದಿದ್ದು, ಕಾರ್ಮಿಕರು ಪ್ಲಾಂಟ್ ಸೈಟ್‍ನಿಂದ ಝಾರ್ಸುಗುಡ ಪಟ್ಟಣಕ್ಕೆ ಬಸ್‍ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಝಾರ್ಸುಗುಡ ಬೈಪಾಸ್ ರಸ್ತೆಯ ಪವರ್ ಹೌಸ್ ಚಾಕ್ ಬಳಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಬಸ್‍ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಹಲವಾರು ನೌಕರರು ಗಂಭಿರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಕಾರ್ಮಿಕರನ್ನು ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ .

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.