ಅಹ್ಮದಾಬಾದ್ ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ: ಏಳು ಕಾರ್ಮಿಕರು ಸಾವು, ಓರ್ವನಿಗೆ ಗಾಯ
ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಲಿಫ್ಟ್ ಕುಸಿದಾಗ ಒಟ್ಟು ಎಂಟು ಮಂದಿ ಲಿಫ್ಟ್‌ನಲ್ಲಿದ್ದರು.

ಅಹ್ಮದಾಬಾದ್: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಲಿಫ್ಟ್ ಕುಸಿದಾಗ ಒಟ್ಟು ಎಂಟು ಮಂದಿ ಲಿಫ್ಟ್‌ನಲ್ಲಿದ್ದರು.
ಗಾಯಗೊಂಡ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಹ್ಮದಾಬಾದ್ ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಏಳನೇ ಮಹಡಿಯಿಂದ ಲಿಫ್ಟ್ ಕುಸಿದಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಆಸ್ಪೈರ್-2 ಎಂದು ಹೆಸರಿಡಲಾಗಿತ್ತು. ಇದು ಗುಜರಾತ್ ವಿಶ್ವವಿದ್ಯಾಲಯದ ಬಳಿ ಇದೆ.
ಮೃತಪಟ್ಟವರನ್ನು ಸಂಜಯಭಾಯಿ ಬಾಬುಭಾಯ್ ನಾಯಕ್, ಜಗದೀಶ್ ಭಾಯಿ ರಮೇಶಭಾಯ್ ನಾಯಕ್, ಅಶ್ವಿನ್ಭಾಯಿ ಸೋಮ್ಭಾಯ್ ನಾಯಕ್, ಮುಖೇಶ್ ಭಾರತಭಾಯಿ ನಾಯಕ್, ಮುಖೇಶ್ಭಾಯಿ ಭಾರತಭಾಯ್ ನಾಯಕ್, ರಾಜಮಲ್ ಸುರೇಶಭಾಯ್ ಖಾರಾಡಿ ಮತ್ತು ಪಂಕಜಭಾಯಿ ಶಂಕರಭಾಯಿ ಖಾರಾಡಿ ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


