126 ದಿನಗಳಲ್ಲಿ 11 ಲಕ್ಷ ಯಾತ್ರಿಕರಿಂದ ಕೇದಾರನಾಥ ದರ್ಶನ: ಹಿಂದಿನ ಎಲ್ಲಾ ದಾಖಲೆ ಪತನ
ಉತ್ತರಾಖಂಡ ಯಾತ್ರಾಧಾಮ ಕೇದಾರನಾಥಕ್ಕೆ ಕಳೆದ 126 ದಿನಗಳಲ್ಲಿ 11 ಲಕ್ಷ ಯಾತ್ರಿಕರು ಆಗಮಿಸಿದ್ದು, ಇದು ಕ್ಷೇತ್ರದ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.

ಕೇದಾರನಾಥ: ಉತ್ತರಾಖಂಡ ಯಾತ್ರಾಧಾಮ ಕೇದಾರನಾಥಕ್ಕೆ ಕಳೆದ 126 ದಿನಗಳಲ್ಲಿ 11 ಲಕ್ಷ ಯಾತ್ರಿಕರು ಆಗಮಿಸಿದ್ದು, ಇದು ಕ್ಷೇತ್ರದ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.
ಕಳೆದ 126 ದಿನಗಳಲ್ಲಿ ಹನ್ನೊಂದು ಲಕ್ಷ ಯಾತ್ರಾರ್ಥಿಗಳು ಕೇದಾರನಾಥ ಧಾಮವನ್ನು ತಲುಪಿದ್ದು, ಈ ವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಈ ಹಿಂದೆ 2019 ರಲ್ಲಿ 10 ಲಕ್ಷ ಯಾತ್ರಿಕರು ಕ್ಷೇತ್ರಕ್ಕೆ ಆಗಮಿಸಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿತ್ತು. ಆದರೆ ಈ ಬಾರಿ ಈ ದಾಖಲೆ ಕೂಡ ಪತನವಾಗಿದೆ.
ಈ ಕುರಿತು ಅಧಿಕಾರಿಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದ್ದು, ಹಾಲಿ ವರ್ಷದ ಯಾತ್ರೆ ವೇಳೆ ದಾಖಲೆ ಸಂಖ್ಯೆಯ ಯಾತ್ರಿಕರು ಆಗಮಿಸಿದ್ದಾರೆ. ಎರಡು ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಯಾತ್ರೆಗೆ ತೊಂದರೆಯಾಗಿತ್ತು, ಆದರೆ ಈ ಬಾರಿ ಯಾತ್ರೆಯನ್ನು ಸರಿಯಾಗಿ ನಡೆಸಲಾಗುತ್ತಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನ ವರ್ಗಾವಣೆ
"ಆರಂಭಿಕ ಹಂತದಲ್ಲಿ ಅತಿಯಾದ ಜನಸಂದಣಿಯಿಂದ ಸಮಸ್ಯೆಗಳಿದ್ದವು. ಸ್ವಚ್ಛತೆಯ ವ್ಯವಸ್ಥೆಯಲ್ಲಿಯೂ ಸ್ವಲ್ಪ ಕೊರತೆ ಕಂಡುಬಂದಿತ್ತು. ಆದರೆ ಎಲ್ಲಾ ವ್ಯವಸ್ಥೆಗಳನ್ನು ಈಗ ಸರಿಪಡಿಸಲಾಗಿದೆ. ಆದ್ದರಿಂದ, ಐದು ನೂರಕ್ಕೂ ಹೆಚ್ಚು ನೈರ್ಮಲ್ಯ ಕಾರ್ಯಕರ್ತರು ರುದ್ರಪ್ರಯಾಗದಿಂದ ಕೇದಾರನಾಥಕ್ಕೆ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ಅಲ್ಲದೆ, ಪ್ರಯಾಣಕ್ಕೆ ಸಂಬಂಧಿಸಿದ ಇಲಾಖೆಗಳು ತಮ್ಮ ಕೆಲಸದ ಬಗ್ಗೆ ನಿರಂತರವಾಗಿ ಗಮನ ಹರಿಸುತ್ತಿವೆ. ಪ್ರಯಾಣದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಧಾಮದಲ್ಲಿ ಯಾತ್ರಾರ್ಥಿಗಳಿಗೆ ಕಾಲ್ನಡಿಗೆ ಮಾರ್ಗ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯಾತ್ರೆ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಎಲ್ಲಾ ಹೋಟೆಲ್ ಲಾಡ್ಜ್ ಗಳನ್ನು ಮುಂಗಡವಾಗಿ ಮಾತ್ರ ಕಾಯ್ದಿರಿಸಲಾಗಿದೆ. ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇದಾರನಾಥ ದರ್ಶಕ್ಕೆ ಇನ್ನೂ ಒಂದೂವರೆ ತಿಂಗಳ ಕಾಲಾವಕಾಶವಿದ್ದು, ಕೇದಾರನಾಥ ಯಾತ್ರಾರ್ಥಿಗಳ ಸಂಖ್ಯೆ 13 ಲಕ್ಷ ದಾಟುವ ನಿರೀಕ್ಷೆಯಿದೆ ಎಂದು ಡಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


