ವಿವಾದಾತ್ಮಕ ಟ್ವೀಟ್: ಕಮಾಲ್ ಖಾನ್ ಗೆ ಜಾಮೀನು
ನಟ ಅಕ್ಷಯ್ ಕುಮಾರ್ ಹಾಗೂ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ನಟ ಕಮಾಲ್ ಆರ್ ಖಾನ್ ಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮುಂಬೈ: ನಟ ಅಕ್ಷಯ್ ಕುಮಾರ್ ಹಾಗೂ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ನಟ ಕಮಾಲ್ ಆರ್ ಖಾನ್ ಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇದಕ್ಕೂ ಮುನ್ನ ಕಮಾಲ್ ಖಾನ್ ವಿರುದ್ಧ 2021 ರಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಂಬೈ ನ ಮತ್ತೊಂದು ಕೋರ್ಟ್ ಮಂಗಳವಾರದಂದು (ಸೆ.06) ರಂದು ಜಾಮೀನು ಮಂಜೂರು ಮಾಡಿತ್ತು.
ವಿವಾದಾತ್ಮಕ ಟ್ವೀಟ್ ಪ್ರಕರಣದಲ್ಲಿ ಕಳೆದ ವಾರ ಖಾನ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಗುರುವಾರ ಬೆಳಿಗ್ಗೆ ಖಾನ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಖಾನ್ ಅವರ ಸಾಮಾಜಿಕ ಜಾಲತಾಣದ ಬರಹಗಳು ಕೋಮು ಪ್ರಚೋದಕನಾರಿಯಾಗಿತ್ತು ಹಾಗೂ ಅವರು ಬಾಲಿವುಡ್ ನ ತಾರೆಯರನ್ನು ಟಾರ್ಗೆಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಖಾನ್ ಪರ ವಾದ ಮಂಡಿಸಿದ ವಕೀಲರು, ಪ್ರಶ್ನೆಗೆ ಗುರಿಯಾಗಿರುವ ಖಾನ್ ಅವರ ಟ್ವೀಟ್ ಗಳು ಲಕ್ಷ್ಮಿ ಬಾಂಬ್ ಸಿನಿಮಾ (ಬಿಡುಗಡೆಯಾಗಿದ್ದು ಲಕ್ಷ್ಮಿ ಎಂಬ ಶೀರ್ಷಿಕೆಯಡಿ) ಕುರಿತಾಗಿತ್ತು ಹಾಗೂ ಪೊಲೀಸರು ಹೇಳಿರುವಂತೆ ಯಾವುದೇ ಅಪರಾಧವೂ ಸಂಭವಿಸಿಲ್ಲ, ಖಾನ್ ಸಿನಿಮಾ ಕ್ಷೇತ್ರದಲ್ಲಿ ವಿಮರ್ಶಕರಾಗಿಯೂ ಇದ್ದಾರೆ ಎಂದು ಜಾಮೀನು ಅರ್ಜಿ ವಾದದಲ್ಲಿ ವಕೀಲರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


