ಸೋನಾಲಿ ಫೋಗಟ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಲಿದೆ ಫೋಗಟ್ ಕುಟುಂಬ
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಗಟ್ ಅವರ ಕುಟುಂಬವು ಈಗ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಹಿಸ್ಸಾರ್: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಗಟ್ ಅವರ ಕುಟುಂಬವು ಈಗ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.
ಸೋನಾಲಿ ಫೋಗಟ್ ಅವರ ಸೋದರಳಿಯ ವಿಕಾಸ್ ಸಿಂಗ್ ಹಾಗೂ ಕುಟುಂಬವು ಸಿಬಿಐ ತನಿಖೆಗಾಗಿ ಗೋವಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ಈಮಧ್ಯೆ, ಗೋವಾ ಪೊಲೀಸರ ತಂಡವು ಇಂದು (ಭಾನುವಾರ) ಗುರ್ಗಾಂವ್‌ಗೆ ಭೇಟಿ ನೀಡಲಿದೆ.
ಸೋನಾಲಿ ಫೋಗಟ್ ಅವರ ಸಹೋದರನ ಪ್ರಕಾರ, ಗೋವಾ ಪೊಲೀಸರು ಫೋಗಟ್ ಅವರ ಫ್ಲಾಟ್‌ಗೆ ಮಧ್ಯಾಹ್ನ 2 ಗಂಟೆಗೆ ತಲುಪಲು ಕುಟುಂಬ ಸದಸ್ಯರನ್ನು ಕೇಳಿದ್ದಾರೆ ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಾತ್ರ ಫ್ಲಾಟ್ ಅನ್ನು ತೆರೆದು ಶೋಧಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೋನಾಲಿ ಫೋಗಟ್ ಹತ್ಯೆ ಪ್ರಕರಣದ ತನಿಖೆಯ 'ಗೌಪ್ಯ ವರದಿಯನ್ನು' ಹರಿಯಾಣ ಸರ್ಕಾರಕ್ಕೆ ನೀಡಿದ್ದೇವೆ: ಪ್ರಮೋದ್ ಸಾವಂತ್
ಸೋನಾಲಿ ಫೋಗಟ್ ಅವರ ಇಬ್ಬರು ಸಹೋದರರು, ಸೋದರ ಮಾವ ಮತ್ತು ಸೋದರಳಿಯರು ಕುಟುಂಬದ ಇತರ ಇಬ್ಬರು ಸದಸ್ಯರೊಂದಿಗೆ ಗುರುಗ್ರಾಮಕ್ಕೆ ತೆರಳಲಿದ್ದಾರೆ. ಸೋನಾಲಿ ಫೋಗಟ್ ಅವರು ಮತ್ತು ಅವರ ಸಹಾಯಕ ಸುಧೀರ್ ಗೋವಾಗೆ ಹೋಗುವ ಮೊದಲು ಈ ಫ್ಲಾಟ್‌ನಲ್ಲಿ ಉಳಿದುಕೊಂಡಿದ್ದರು.
ಕುಟುಂಬದವರ ಪ್ರಕಾರ, ಗೋವಾ ಪೊಲೀಸರು ತನಿಖೆ ಹೆಸರಿನಲ್ಲಿ ಏನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದು, 'ಗೋವಾ ಪೊಲೀಸರು 4 ದಿನಗಳ ರಜೆಯ ಪ್ಯಾಕೇಜ್‌ನಲ್ಲಿ ಬಂದಿದ್ದಾರೆ' ಎಂದು ದೂರಿದ್ದಾರೆ.
42 ವರ್ಷದ ಸೋನಾಲಿ ಫೋಗಟ್ ಅವರು ಗೋವಾದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಆಕೆಯ ಇಬ್ಬರು ಸಹಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


