ಪತ್ನಿಗೆ ಕಾರಿನಿಂದ ಡಿಕ್ಕಿ: ಬಾಲಿವುಡ್ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಬಂಧನ
ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದ ಕಾರಣ ಆರೋಪದ ಮೇರೆಗೆ ಬಾಲಿವುಡ್ ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರನ್ನು ಮುಂಬೈ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ: ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದ ಕಾರಣ ಆರೋಪದ ಮೇರೆಗೆ ಬಾಲಿವುಡ್ ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರನ್ನು ಮುಂಬೈ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಧೇರಿಯಲ್ಲಿರುವ ದಂಪತಿಗಳ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಅಕ್ಟೋಬರ್ 19 ರಂದು ಮಿಶ್ರಾ ಅವರ ಕಾರಿನಲ್ಲಿ ಇನ್ನೊಬ್ಬ ಮಹಿಳೆ ಇರುವುದನ್ನು ಪತ್ನಿ ನೋಡಿದಾಗ ಈ ಘಟನೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ದೇಹತಿ ಡಿಸ್ಕೋದ ನಿರ್ಮಾಪಕನ ವಿರುದ್ಧ ಪತ್ನಿ ದೂರು ದಾಖಲಿಸಿದ ನಂತರ ಮಿಶ್ರಾ ಅವರನ್ನು ಗುರುವಾರ ಮನೆಯಿಂದ ಅಂಬೋಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಶುಕ್ರವಾರ ಬೆಳ್ಳಂಬೆಳಗ್ಗೆ ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಿಶ್ರಾ ಅವರ ಪತ್ನಿ ತನ್ನ ಪತಿಯನ್ನು ಹುಡುಕುತ್ತಾ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ಕಾರಿನಲ್ಲಿ ಇನ್ನೊಬ್ಬ ಮಹಿಳೆ ಆತನೊಂದಿಗೆ ಇರುವುದನ್ನು ನೋಡಿದ್ದಾಳೆ. ಕೂಡಲೇ ಆತನ ವಿರುದ್ಧ ಜಗಳಕ್ಕೆ ಪತ್ನಿ ಮುಂದಾಗುತ್ತಿದ್ದಂತೆಯೇ, ಮಿಶ್ರಾ ಅಲ್ಲಿಂದ ತಪ್ಪಿಸಿಕೊಳ್ಳಲು ಕಾರು ಚಲಾಯಿಸಿದ್ದಾರೆ. ಆಗ ಅವರ ಪತ್ನಿಗೆ ಡಿಕ್ಕಿ ಹೊಡೆದು, ಅವರ ಕಾಲುಗಳು, ಕೈ ಮತ್ತು ತಲೆಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ನೀಡಿದ ದೂರಿನ ಆಧಾರದ ಮೇಲೆ, ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 279 (ಅತಿವೇಗದ ಚಾಲನೆ) ಮತ್ತು 337 ರ ಅಡಿಯಲ್ಲಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


