ಬ್ರಿಟನ್ ಪ್ರಧಾನಿಯಾಗಿ ಸುನಕ್ ಅಧಿಕಾರ: ಚಿದಂಬರಂ, ತರೂರ್ ಹೇಳಿಕೆ ತಳ್ಳಿಹಾಕಿದ ಕಾಂಗ್ರೆಸ್
ಅಲ್ಪಸಂಖ್ಯಾತ ರಿಷಿ ಸುನಕ್ ಅವರು ಬ್ರಿಟನ್ ನ ಪ್ರಧಾನಿಯಾಗಿದ್ದು, ಇದರಿಂದ ಭಾರತ ಪಾಠ ಕಲಿಯಬೇಕು ಎಂದಿದ್ದ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ಶಶಿ ತರೂರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಮಂಗಳವಾರ ತಳ್ಳಿಹಾಕಿದ್ದು,...

ನವದೆಹಲಿ: ಅಲ್ಪಸಂಖ್ಯಾತ ರಿಷಿ ಸುನಕ್ ಅವರು ಬ್ರಿಟನ್ ನ ಪ್ರಧಾನಿಯಾಗಿದ್ದು, ಇದರಿಂದ ಭಾರತ ಪಾಠ ಕಲಿಯಬೇಕು ಎಂದಿದ್ದ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ಶಶಿ ತರೂರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಮಂಗಳವಾರ ತಳ್ಳಿಹಾಕಿದ್ದು, ಈ ಹಿಂದೆ ಹಲವು ಅಲ್ಪಸಂಖ್ಯಾತರು ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಯಾಗಿರುವುದರಿಂದ ಭಾರತ ಬೇರೆ ದೇಶದಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಹಲವು ವರ್ಷಗಳಿಂದ ವೈವಿಧ್ಯತೆಯನ್ನು ಗೌರವಿಸುವುದು ಭಾರತದ ವೈಶಿಷ್ಟವಾಗಿದೆ ಮತ್ತು ಹಲವಾರು ವರ್ಷಗಳಿಂದ ದೇಶದಲ್ಲಿ ಉನ್ನತ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿದ ಜಾಕೀರ್ ಹುಸೇನ್, ಫಕ್ರುದ್ದೀನ್ ಅಲಿ ಅಹಮದ್ ಮತ್ತು ಎಪಿಜೆ ಅಬ್ದುಲ್ ಕಲಾಂ ಇದಕ್ಕೆ ಉತ್ತಮ ಉದಾಹರಣೆ ಎಂದಿದ್ದಾರೆ.
ಭಾರತೀಯ ಮೂಲದ ಸುನಕ್ ಅವರನ್ನು ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಿಯಾಗಿ ಆಯ್ಕೆ ಮಾಡಿದ ನಂತರ, ಚಿದಂಬರಂ ಮತ್ತು ತರೂರ್ ಅವರು "ಭಾರತವು ಬ್ರಿಟನ್ ನಿಂದ ಪಾಠ ಕಲಿಯಬೇಕು" ಎಂದು ಹೇಳಿದ್ದರು.
"ನಮ್ಮ ದೇಶದಲ್ಲಿ 1967 ರಲ್ಲಿ ಡಾ.ಜಾಕೀರ್ ಹುಸೇನ್ ಅವರು ಮೊದಲ ಅಲ್ಪಸಂಖ್ಯಾತ ರಾಷ್ಟ್ರಪತಿಯಾದರು. ನಂತರ ಫಕ್ರುದ್ದೀನ್ ಅಲಿ ಅಹಮದ್ ಮತ್ತು ಡಾ. ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು. ನಾನು ನಿಮಗೆ ಉದಾಹರಣೆಗಳನ್ನು ನೀಡುತ್ತಾ ಹೋದರೆ ಬರ್ಕತುಲ್ಲಾಖಾನ್ ಮುಖ್ಯಮಂತ್ರಿಯಾದರು ಮತ್ತು ಎಆರ್ ಅಂತುಲೇ ಮುಖ್ಯಮಂತ್ರಿಯಾದರು" ಎಂದು ಜೈರಾಮ್ ರಮೇಶ್ ಸುದ್ದಿಗಾರರಿಗೆ ತಿಳಿಸಿದರು.
ಚಿದಂಬರಂ ಮತ್ತು ತರೂರ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್, "ನೀವು ಅವರನ್ನೇ ಕೇಳಬೇಕು. ನಾನು ಭಾರತ್ ಜೋಡೋ ಯಾತ್ರೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಮತ್ತು ಇತರ ನಾಯಕರು ಏನು ಹೇಳಿದ್ದಾರೆಂದು ನಾನು ಮಾತನಾಡುವುದಿಲ್ಲ. ಅವರು ಏನು ಹೇಳಿದ್ದಾರೆಂದು ನೀವು ಅವರನ್ನೇ ಕೇಳಬೇಕು, ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


