ಬೇಕಿದ್ದರೆ ಮೂರು ಮದುವೆಯಾಗಿ; ನಟ ಪವನ್ ಕಲ್ಯಾಣ್‌ಗೆ ನೋಟಿಸ್ ನೀಡಿದ ಆಂಧ್ರಪ್ರದೇಶದ ಮಹಿಳಾ ಆಯೋಗ
ಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆ ತರುವಂತಹ ಮೂರು ವಿವಾಹಗಳ ಕುರಿತು ಹೇಳಿಕೆ ನೀಡಿರುವ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್‌ಗೆ ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗ (ಎಪಿಎಸ್‌ಸಿಡಬ್ಲ್ಯು) ಶನಿವಾರ ನೋಟಿಸ್ ನೀಡಿದೆ.

ವಿಜಯವಾಡ: ಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆ ತರುವಂತಹ ಮೂರು ವಿವಾಹಗಳ ಕುರಿತು ಹೇಳಿಕೆ ನೀಡಿರುವ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್‌ಗೆ ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗ (ಎಪಿಎಸ್‌ಸಿಡಬ್ಲ್ಯು) ಶನಿವಾರ ನೋಟಿಸ್ ನೀಡಿದೆ.
ಆಯೋಗದ ಅಧ್ಯಕ್ಷೆ ವಾಸಿರೆಡ್ಡಿ ಪದ್ಮಾ ಅವರು ತಮ್ಮ ನೋಟಿಸ್‌ನಲ್ಲಿ, ಪುರುಷನೊಬ್ಬ ತನ್ನ ಹೆಂಡತಿಗೆ 'ಭರಣಂ' (ಜೀವನಾಂಶ) ನೀಡಿದ ನಂತರ ಆಕೆಯಿಂದ ವಿಚ್ಛೇದನ ಪಡೆಯಬಹುದು ಎಂಬ ನಟನ ಹೇಳಿಕೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಪವನ್ ಕಲ್ಯಾಣ್ ಅವರು ತಾವು ನೀಡಿರುವ ವಿವಾದಾತ್ಮಕ ಹೇಳಿಕೆಯ ಅಗಾಧತೆಯನ್ನು ಸ್ವತಃ ಅರಿತು ಕ್ಷಮೆಯಾಚಿಸುತ್ತಾರೆ ಎಂದು ರಾಜ್ಯದ ಮಹಿಳೆಯರು ನಿರೀಕ್ಷಿಸಿದ್ದಾರೆ ಎಂದು ಅವರು ಹೇಳಿದರು.
ಆದರೆ, ಇಷ್ಟು ದಿನ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಎಪಿಎಸ್‌ಸಿಡಬ್ಲ್ಯು ನೋಟಿಸ್ ಜಾರಿಗೊಳಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ ಎಂದು ಪದ್ಮಾ ಹೇಳಿದ್ದಾರೆ.
ಮೊದಲ ಮದುವೆ ಹೊಂದಾಣಿಕೆಯಾಗದಿದ್ದರೆ ₹5 ಕೋಟಿ ಹಣ ನೀಡಿ ನನ್ನಂತೆ ವಿಚ್ಛೇದನೆ ಪಡೆಯಿರಿ. ಎರಡನೇ ಮದುವೆಯೂ ಸಲ್ಲದು ಎನ್ನಿಸಿದಾಗ ಎರಡನೇ ಪತ್ನಿಗೆ ಉಳಿದ ಆಸ್ತಿಯನ್ನು ಬರೆದುಕೊಟ್ಟು ವಿಚ್ಛೇದನ ನೀಡಿ ನಂತರ ಮೂರನೇ ಮದುವೆ ಆಗಿದ್ದೇನೆ. ನೀವು ಕೂಡ ಮೂರು ಮದುವೆಯಾಗಿ, ಯಾರು ತಡೆದವರು? ಎಂಬ ಜನಸೇನಾ ಮುಖ್ಯಸ್ಥರ ಹೇಳಿಕೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಅವರು ಚಲನಚಿತ್ರ ನಾಯಕ ಮತ್ತು ರಾಜಕೀಯ ಪಕ್ಷದ ಅಧ್ಯಕ್ಷರಾಗಿರುವ ಕಾರಣ ಅವರ ಮಾತುಗಳು ಸಮಾಜದ ಮೇಲೆ, ವಿಶೇಷವಾಗಿ ಅವರ ಯುವ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಬಹುದು ಎಂಬುದು ನಿಮಗೆ ತಿಳಿದಿದೆಯೇ. 'ಸ್ಟೆಪ್ನಿ' ಎಂಬ ಪದವನ್ನು ಬಳಸಿದ್ದಕ್ಕಾಗಿ ಕಿಡಿಕಾರಿರುವ ಅವರು, ಅಂತಹ ಪದಗಳನ್ನು ಮಹಿಳೆಯರನ್ನು ಸಂತೋಷದ ವಸ್ತುವನ್ನಾಗಿ ನೋಡುವವರು ಮಾತ್ರ ಬಳಸುತ್ತಾರೆ ಎಂದು ಆಯೋಗದ ಅಧ್ಯಕ್ಷೆ ಪ್ರಶ್ನಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಇಂತಹ ಹೇಳಿಕೆಗಳ ಬಗ್ಗೆ ಆಯೋಗವು ಮಹಿಳೆಯರಿಂದ ಹಲವಾರು ದೂರುಗಳನ್ನು ಸ್ವೀಕರಿಸಿದೆ. ಈ ಆಧಾರದ ಮೇಲೆ, ಮಹಿಳೆಯರ ಕ್ಷಮೆಯಾಚಿಸುವಂತೆ ಮತ್ತು ತಮ್ಮ ಹೇಳಿಕೆಗಳನ್ನು ಹಿಂಪಡೆಯುವಂತೆ ಜನಸೇನಾ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


