ಪಕ್ಷದಲ್ಲಿನ ನನ್ನ ಪಾತ್ರ, ಕಾರ್ಯ ನಿಯೋಜನೆ ಕುರಿತು ನೂತನ ಅಧ್ಯಕ್ಷರೇ ನಿರ್ಧರಿಸುತ್ತಾರೆ: ರಾಹುಲ್ ಗಾಂಧಿ
ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಿಗೆ ಸರ್ವೋಚ್ಚ ಸ್ಥಾನವಿದ್ದು, ಆ ಹುದ್ದೆಗೆ ಯಾರು ಆಯ್ಕೆಯಾದರು ಅವರೇ ಪಕ್ಷದಲ್ಲಿನ ನನ್ನ ಪಾತ್ರವನ್ನು ನಿರ್ಧರಿಸುತ್ತಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.

ಆದೋನಿ: ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಿಗೆ ಸರ್ವೋಚ್ಚ ಸ್ಥಾನವಿದ್ದು, ಆ ಹುದ್ದೆಗೆ ಯಾರು ಆಯ್ಕೆಯಾದರು ಅವರೇ ಪಕ್ಷದಲ್ಲಿನ ನನ್ನ ಪಾತ್ರವನ್ನು ನಿರ್ಧರಿಸುತ್ತಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಎಲ್ಲಿ ನಿಯೋಜನೆಗೊಳಿಸಲಾಗುತ್ತದೆ, ನನ್ನ ಪಾತ್ರದ ಕುರಿತು ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ನಿರ್ಧರಿಸುತ್ತಾರೆಂದು ಹೇಳಿದರು.
ಬಳಿಕ ಕಾರ್ಯವೈಖರಿ ಕುರಿತು ಅಧ್ಯಕ್ಷರಿಗೆ ವರದಿ ನೀಡುವಿರೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷರಿಗೆ ಸರ್ವೋಚ್ಛ ಅಧಿಕಾರವಿರುತ್ತದೆ. ಕಾಂಗ್ರೆಸ್ ನಲ್ಲಿರುವ ಪ್ರತೀಯೊಬ್ಬರೂ ಅವರಿಗೆ ವರದಿ ನೀಡಬೇಕು. ನನ್ನ ಪಾತ್ರ, ಕೆಲಸ ಕುರಿತೂ ಅವರೇ ನಿರ್ಧರಿಸುತ್ತಾರೆಂದು ಹೇಳಿದರು.
ಅಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮುನ್ನವೇ ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆಯವರೇ ಅಧ್ಯಕ್ಷರೆಂದು ಹೇಳಿದ್ದು, ಎಲ್ಲರಲ್ಲಿ ಕುತೂಹಲವನ್ನುಂಟು ಮಾಡಿತು. ನಂತರ ಇದನ್ನು ಗಮನಿಸಿದ ರಾಹುಲ್ ಅವರು, ಖರ್ಗೆ ಮತ್ತು ತರೂರ್ ಇಬ್ಬರು ಅನುಭವವುಳ್ಳ ನಾಯಕರು. ಅವರಿಗೆ ನನ್ನ ಸಲಹೆಯ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಉತ್ತರಪ್ರದೇಶದಲ್ಲಿ ನಡೆದ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಶಶಿ ತರೂರ್ ಅವರ ಆರೋಪಕ್ಕೆ ಉತ್ತರಿಸಿ, ಪಕ್ಷವು ಸಾಂಸ್ಥಿಕ ಚೌಕಟ್ಟನ್ನು ಒಳಗೊಂಡಿದ್ದು, ಎಲ್ಲವನ್ನೂ ಅದೇ ನೋಡಿಕೊಳ್ಳುತ್ತದೆ ಎಂದರು.
ಚುನಾವಣಾ ಆಯೋಗವನ್ನು ಒಳಗೊಂಡಿರುವ ಏಕೈಕ ಪಕ್ಷ ನಮ್ಮದಾಗಿದೆ. ಮಧುಸೂಧನ್ ಮಿಸ್ಟ್ರಿ ಅವರು ನ್ಯಾಯಯುತ ವ್ಯಕ್ತಿಯಾಗಿದ್ದು, ಅಕ್ರಮಗಳ ಬಗ್ಗೆ ಅವರೇ ನಿರ್ಧಾರ ಕೈಗೊಳ್ಳುತ್ತಾರೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


