10 ದಿನದೊಳಗೆ ಜಾಗ ಖಾಲಿ ಮಾಡುವಂತೆ ಲಾರ್ಡ್ ಹನುಮಂತನಿಗೆ ರೈಲ್ವೆ ಅಧಿಕಾರಿಗಳಿಂದ ನೋಟಿಸ್!
ಇತ್ತೀಚೆಗೆ ಧನ್‌ಬಾದ್ ರೈಲು ವಿಭಾಗದ ಸಹಾಯಕ ಇಂಜಿನಿಯರ್ ಆನಂದ್ ಕುಮಾರ್ ಪಾಂಡೆ ಅವರು ರೈಲ್ವೆಗೆ ಸೇರಿದ ಬೇಕರ್ ಬಂದ್ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿರುವುದಕ್ಕಾಗಿ ತೆರವುಗೊಳಿಸಲು ದೇವರಿಗೆ ನೋಟಿಸ್ ನೀಡಿದ್ದಾರೆ.

ರಾಂಚಿ: 2012ರಲ್ಲಿ ತೆರೆಕಂಡ ಬಾಲಿವುಡ್ ಚಲನಚಿತ್ರ ಓಹ್ ಮೈ ಗಾಡ್ ಅನ್ನು ನೆನಪಿಸಿಕೊಳ್ಳಿ! ಆಸ್ಟ್ರೇಲಿಯನ್ ಚಿತ್ರ ದಿ ಮ್ಯಾನ್ ಹೂ ಸ್ಯೂಡ್ ಗಾಡ್? ಪ್ರೇರಿತ ಚಿತ್ರದಲ್ಲಿ ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದರು. ಆದರೆ, ಇದೀಗ ಲಾರ್ಡ್ ಹನುಮಂತನ ಮೇಲೆ ಮೊಕದ್ದಮೆ ಹೂಡಿಲ್ಲ. ಬದಲಿಗೆ, ತೆರವು ನೋಟಿಸ್ ನೀಡಲಾಗಿದೆ.
ಇತ್ತೀಚೆಗೆ ಧನ್‌ಬಾದ್ ರೈಲು ವಿಭಾಗದ ಸಹಾಯಕ ಇಂಜಿನಿಯರ್ ಆನಂದ್ ಕುಮಾರ್ ಪಾಂಡೆ ಅವರು ರೈಲ್ವೆಗೆ ಸೇರಿದ ಬೇಕರ್ ಬಂದ್ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿರುವುದಕ್ಕಾಗಿ ತೆರವುಗೊಳಿಸಲು ದೇವರಿಗೆ ನೋಟಿಸ್ ನೀಡಿದ್ದಾರೆ.
ಗೋಡೆಗೆ ಅಂಟಿಸಿರುವ ನೋಟಿಸ್‌ನಲ್ಲಿ, ನಿಮ್ಮ ದೇವಸ್ಥಾನ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಹೀಗಾಗಿ 10 ದಿನದೊಳಗೆ ದೇವಸ್ಥಾನವನ್ನು ತೆರವುಗೊಳಿಸದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದ್ದು, ನೋಟಿಸ್‌ನಲ್ಲಿ ಅತಿಕ್ರಮಣಕಾರ ಹನುಮಂತ ಎಂದು ಹೆಸರಿಸಲಾಗಿದೆ.
ಪಾಂಡೆ ಅವರು ದೇವಾಲಯದ ಸುತ್ತಲೂ ತಾತ್ಕಾಲಿಕವಾಗಿ ವಾಸಿಸುತ್ತಿರುವ ಇತರ 27 ಕುಟುಂಬಗಳಿಗೂ ನೋಟಿಸ್ ನೀಡಿದ್ದಾರೆ. ದೇವಸ್ಥಾನದ ಗೋಡೆಗೆ ಹನುಮಾನ್ ಜಿ ಅವರಿಗೆ ಎಂದಿರುವ ನೋಟೀಸ್ ಅಂಟಿಸಿರುವುದನ್ನು ಗಮನಿಸಿದ ಸ್ಥಳೀಯರು ಪ್ರತಿಭಟನೆ ಆರಂಭಿಸಿದಾಗ ವಿಷಯ ಬೆಳಕಿಗೆ ಬಂದಿದೆ. ರೈಲ್ವೆ ಅಧಿಕಾರಿಗಳು ತಕ್ಷಣ ತಮ್ಮ ತಪ್ಪನ್ನು ಅರಿತು ಅದನ್ನು ತೆಗೆದುಹಾಕಿದ್ದಾರೆ.
'ಇದು ಕಣ್ತಪ್ಪಿನಿಂದ ಆಗಿರುವ ದೋಷವಾಗಿದೆ. ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಅತಿಕ್ರಮಣಕಾರರಿಂದ ಭೂಮಿಯನ್ನು ತೆರವುಗೊಳಿಸಲು ಮಾತ್ರ ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


