ರಾಜಸ್ಥಾನ: ಕುಟುಂಬದ ಅರ್ಚಕ ಸೇರಿದಂತೆ ಇತರರಿಂದ ದಲಿತ ಮಹಿಳೆ ಗ್ಯಾಂಗ್ ರೇಪ್, ವಿಡಿಯೋ ಮಾಡಿದ ಆರೋಪಿ
ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ 25 ವರ್ಷದ ದಲಿತ ಮಹಿಳೆ ಮೇಲೆ ಅರ್ಚಕ ಸೇರಿದಂತೆ ಇತರರ ಗುಂಪೊಂದು ಅತ್ಯಾಚಾರವೆಸಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜೈಪುರ: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ 25 ವರ್ಷದ ದಲಿತ ಮಹಿಳೆ ಮೇಲೆ ಅರ್ಚಕ ಸೇರಿದಂತೆ ಇತರರ ಗುಂಪೊಂದು ಅತ್ಯಾಚಾರವೆಸಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಸಂಜಯ್ ಶರ್ಮಾ ಸಂತ್ರಸ್ತೆಯ ಕುಟುಂಬದ ಅರ್ಚಕನಾಗಿದ್ದು, ಆಕೆಯ ಕುಟುಂಬಕ್ಕಾಗಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.
ದೂರಿನ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದುದನ್ನು ಕಂಡು ಆರೋಪಿಯು ಮೊದಲು ಅತ್ಯಾಚಾರವೆಸಗಿದ್ದಾನೆ ಮತ್ತು ಆಕೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ. ನಂತರ, ಆಕೆಯಿಂದ ಹಣ ವಸೂಲಿ ಮಾಡಿ ಮತ್ತೆ ಇತರರೊಂದಿಗೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಜ್ಮೀರ್ ಉತ್ತರ ಡಿಎಸ್ಪಿ ಛಾವಿ ಶರ್ಮಾ ತಿಳಿಸಿದ್ದಾರೆ.
ಆರೋಪಿಯು ಸಂತ್ರಸ್ತೆಗೆ ಮತ್ತು ಬರುವ ಔಷದವನ್ನು ನೀಡಿದ್ದು, ಎಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಹೇಳಲು ಸಾಧ್ಯವಿಲ್ಲ ಎಂದು ಡಿಎಸ್ಪಿ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದು, ಆರೋಪಿಗಳು ನನ್ನನ್ನು ಬಂಧಿಸಿಟ್ಟಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.
ಆರೋಪಿಗಳು ಆಕೆಯ ಮಕ್ಕಳು ಮತ್ತು ಪತಿಯನ್ನು ಕೊಲ್ಲುವುದಾಗಿ ಮತ್ತು ಆಕೆಯ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕಿಯೊಡ್ಡಿದ್ದಾರೆ. ದೂರುದಾರರು ತಮ್ಮ ವಶದಲ್ಲಿದ್ದಾಗ ಆರೋಪಿಗಳು ಆಕೆಗೆ ನಿದ್ರಾಜನಕ ಚುಚ್ಚುಮದ್ದು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಮನೆಗೆ ಹಿಂತಿರುಗದಿದ್ದಾಗ, ಆಕೆಯ ಪತಿಯು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ ನಂತರ, ಆರೋಪಿಗಳು ಸೆಪ್ಟೆಂಬರ್ 27 ರಂದು ಆಕೆಯನ್ನು ಪೊಲೀಸ್ ಠಾಣೆಯ ಹೊರಗೆ ಬಿಟ್ಟುಹೋಗಿದ್ದಾರೆ.
ದೂರಿನ ಆಧಾರದ ಮೇಲೆ ಅಕ್ಟೋಬರ್ 7 ರಂದು ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಛಾವಿ ಶರ್ಮಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


