ಟಿಆರ್ ಎಸ್ ನಲ್ಲಿ ಒಡಕು? ರಾಷ್ಟ್ರೀಯ ಪಕ್ಷ ಘೋಷಣಾ ಸಮಾರಂಭದಿಂದ ಕವಿತಾ ದೂರ, ಅನೇಕ ಅನುಮಾನಗಳು
ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಇತ್ತೀಚಿಗೆ ತಮ್ಮ ಹೊಸ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ ಘೋಷಣಾ ಸಮಾರಂಭದಲ್ಲಿ ಕೆಸಿಆರ್ ಅವರ ಪುತ್ರಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಕೆ. ಕವಿತಾ ಗೈರಾದದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಇತ್ತೀಚಿಗೆ ತಮ್ಮ ಹೊಸ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ ಘೋಷಣಾ ಸಮಾರಂಭದಲ್ಲಿ ಕೆಸಿಆರ್ ಅವರ ಪುತ್ರಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಕೆ. ಕವಿತಾ ಗೈರಾದದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಹೈ ಪ್ರೊಪೈಲ್ ಸಮಾರಂಭದಿಂದ ಮಾತ್ರ ಕವಿತಾ ದೂರ ಉಳಿದಿಲ್ಲ. ಮುಂಬರುವ ಮುನುಗೊಡು ಉಪ ಚುನಾವಣೆಯ ಉಸ್ತುವಾರಿ ಪಟ್ಟಿಯಿಂದಲೂ ಅವರ ಹೆಸರನ್ನು ಕೈ ಬಿಡಲಾಗಿದೆ. ಇದು ಮತ್ತೆ ಕಣ್ಣು ಕೆಂಪಾಗುವಂತೆ ಮಾಡಿದೆ.
ಬುಧವಾರ ದಸರಾ ಹಬ್ಬದ ವೇಳೆ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಮತ್ತು ಕರ್ನಾಟಕದ ಜೆಡಿಎಸ್ ಮೂಲಕ ಬೆಂಬಲದೊಂದಿಗೆ ಕೆಸಿಆರ್, ಬಿಎಸ್ ಆರ್ ರಾಷ್ಟ್ರೀಯ ಪಕ್ಷವನ್ನು ಘೋಷಿಸಿದರು. ಹೊಸ ಪಕ್ಷ ಘೋಷಣೆ ದಿನ ಕವಿತಾ ಮನೆಯಲ್ಲಿದ್ದು ದಸರಾ ಆಚರಿಸಿರುವುದು ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದೆ. ಶುಭ ಸಂದರ್ಭದಲ್ಲಿ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ್ದಾಗಿ ಕವಿತಾ ಟ್ವೀಟ್ ಮಾಡಿದ್ದರು.
ಹೊಸ ಪಕ್ಷ ಘೋಷಣೆ ಸಮಾರಂಭದಲ್ಲಿ ಕೆಟಿಆರ್ ಕೂಡಾ ಪಾಲ್ಗೊಂಡಿದ್ದರು ಆದರೆ, ಕವಿತಾ ಟಿಆರ್ ಎಸ್ ಸಾಮಾನ್ಯ ಸಭೆ ಹಾಗೂ ಬಿಆರ್ ಎಸ್ ಘೋಷಣಾ ಸಮಾರಂಭದಿಂದ ದೂರ ಉಳಿದಿರುವ ಬಗ್ಗೆ ಬಿಜೆಪಿಯ ಕೆಲ ಮುಖಂಡರು ಅನುಮಾನ ವ್ಯಕ್ತಪಡಿಸುತ್ತಿರುವಂತೆಯೇ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶ್ನೆ ಮಾಡಲಾಗುತ್ತಿದೆ.
ಈ ಕುರಿತು ಕವಿತಾ ಅವರ ಕಚೇರಿ ಹಾಗೂ ಟಿಆರ್ ಎಸ್ ಮುಖಂಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


