ದೇಶ

'ತುಂಗನಾಥ'ನಿಗೆ ಮಂಜಿನ ಹೊದಿಕೆ: ಮೈಜುಮ್ಮೆನ್ನಿಸುವ 'ವಿಶ್ವದ ಅತಿ ಎತ್ತರದ ಶಿವ ದೇವಾಲಯ'ದ ವೈಮಾನಿಕ ನೋಟ!

ವಿಶ್ವದ ಅತಿ ಎತ್ತರದ ಶಿವ ದೇವಾಲಯ ಎಂಬ ಖ್ಯಾತಿ ಹೊಂದಿರುವ ತುಂಗನಾಥ್ ದೇಗುಲದ ವೈಮಾನಿಕ ನೋಟದ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

'ತುಂಗನಾಥ'ನಿಗೆ ಮಂಜಿನ ಹೊದಿಕೆ: ಮೈಜುಮ್ಮೆನ್ನಿಸುವ 'ವಿಶ್ವದ ಅತಿ ಎತ್ತರದ ಶಿವ ದೇವಾಲಯ'ದ ವೈಮಾನಿಕ ನೋಟ!
ತುಂಗನಾಥ್ ದೇಗುಲ
Published On :

ಡೆಹ್ರಾಡೂನ್: ವಿಶ್ವದ ಅತಿ ಎತ್ತರದ ಶಿವ ದೇವಾಲಯ ಎಂಬ ಖ್ಯಾತಿ ಹೊಂದಿರುವ ತುಂಗನಾಥ್ ದೇಗುಲದ ವೈಮಾನಿಕ ನೋಟದ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ನಾರ್ವೇ ರಾಯಭಾರಿ ಎರಿಕ್ ಸೋಲ್ಹೈಮ್ ಅವರು ಇತ್ತೀಚೆಗೆ ಹಿಮಾಲಯದ ಅತಿ ಎತ್ತರದ ಶಿವ ದೇವಾಲಯ ತುಂಗನಾಥ್ ದೇಗುಲದ ಡ್ರೋನ್ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, "ಇನ್‌ಕ್ರೆಡಿಬಲ್ ಇಂಡಿಯಾ"ದ ಮೋಡಿ ಮಾಡುವ ಸೌಂದರ್ಯ.. ವಿಶ್ವದ ಅತಿ ಎತ್ತರದ ಮಹದೇವ ಮಂದಿರ.., 5000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ! ಎಂದು ಬಣ್ಣಿಸಿದ್ದಾರೆ. ಈ ವೈರಲ್ ವಿಡಿಯೋ 720,000 ಕ್ಕೂ ಹೆಚ್ಚು ಬಾರಿ ವೀಕ್ಷಣೆಗಳನ್ನು ಪಡೆದಿದ್ದು, 50,000 ಕ್ಕೂ ಹೆಚ್ಚು ಲೈಕ್ ಗಳು ಬಂದಿದೆ.

ಈ ಅದ್ಬುತವಾದ ವಿಡಿಯೋದಲ್ಲಿ ತುಂಗನಾಥ ದೇಗುಲ ಸಂಪೂರ್ಣ ಹಿಮದಿಂದ ಆವೃತವಾಗಿದ್ದು, ದೇಗುಲ ಮಾತ್ರವಲ್ಲದೇ ದೇಗುಲ ಇರುವ ಇಡೀ ಪರ್ವತ ಶ್ರೇಣಿ ಹಿಮದಿಂದ ಮುಚ್ಚಲ್ಪಟ್ಟಿದೆ. ಈ ದೇಗುಲದ 360-ಡಿಗ್ರಿ ವೈಮಾನಿಕ ನೋಟವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಅಂತೆಯೇ ವಿಡಿಯೋಗೆ ಹಿನ್ನಲೆ ಸಂಗೀತವಾಗಿ ಬಾಲಿವುಡ್ ನ ‘ಕೇದಾರನಾಥ’ ಸಿನಿಮಾದ ‘ನಮೋ ನಮೋ’ ಎಂಬ ಹಾಡು ಕೂಡ ವಿಡಿಯೋ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ.

"ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು, ಇದು ಹಿಮಪಾತಗಳು ಮತ್ತು ಭೂಕಂಪಗಳಿಂದಲೂ ಸಂರಕ್ಷಿಸಲ್ಪಟ್ಟಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ತುಂಗನಾಥ ಮಹಾದೇವ ದೇವಾಲಯ, ಪಂಚ ಕೇದಾರಗಳಲ್ಲಿ ಒಂದಾಗಿದ್ದು, ಈ ಪೈಕಿ ತುಂಗನಾಥ ದೇವಾಲಯ ಅತೀ ಎತ್ತರದಲ್ಲಿ ಅಂದರೆ 3,62,07 ಮೀ ಎತ್ತರದಲ್ಲಿದೆ. ಪಂಚಕೇದಾರದಲ್ಲಿ ಪ್ರಮುಖ ದೇಗುಲವಾಗಿರುವ ಕೇದಾರನಾಥ ದೇಗುಲ 3,583ಮೀ (11,755 ಅಡಿ) ಎತ್ತರದಲ್ಲಿದೆ. ಉಳಿದಂತೆ ರುದ್ರನಾಥ ದೇವಸ್ಥಾನ  3,559 ಮೀ ಅಥವಾ 11,677 ಅಡಿ, ಮಧ್ಯಮಹೇಶ್ವರ ದೇವಸ್ಥಾನ ಅಥವಾ ಮದ್ಮಹೇಶ್ವರ 3,490 ಮೀ ಅಥವಾ 11,450 ಅಡಿ ಎತ್ತರದಲ್ಲಿ ಮತ್ತು ಕಲ್ಪೇಶ್ವರ ದೇವಸ್ಥಾನ 020 ಅಡಿ) ಅಥವಾ 20,70 ಅಡಿ ಎತ್ತರದಲ್ಲಿದೆ. ಈ ಪಂಚ ಕೇದಾರವು ಚಾರ್ ಧಾಮ್‌ಗಳ ಭಾಗವಾಗಿದೆ.ಇತರ ಮೂರು ಧಾಮಗಳೆಂದರೆ ಬದರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿಯಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ದೇಗುಲ ಕೂಡ ಒಂದಾಗಿದೆ.

ದೇವಾಲಯಕ್ಕೆ ಚಾರಣವು ಅದ್ಭುತವಾಗಿದೆ. ಸ್ವಲ್ಪ ಮೇಲಿರುವ ಚಂದ್ರಶಿಲಾದಿಂದ ಹಿಮಾಲಯದ ಶಿಖರಗಳು 270-ಡಿಗ್ರಿ ವಿಶಾಲವಾದ ನೋಟವನ್ನು ಹೊಂದಿವೆ...ಮತ್ತೊಬ್ಬರು ಹೇಳಿದ್ದಾರೆ. ಕೇದಾರನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ 3,680 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾಗಿದೆ. ದೇವಾಲಯವು 1,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.