ಹೈದ್ರಾಬಾದ್: ವೈಎಸ್ ಆರ್ ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಇದ್ದ ಕಾರನ್ನು ಎಳೆದೊಯ್ದ ಪೊಲೀಸರು!
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ಅವರ ರೆಡ್ಡಿ ಅವರ ಸಹೋದರಿ ಹಾಗೂ ವೈಎಸ್ ಆರ್ ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಇದ್ದ ಕಾರನ್ನು ಪೊಲೀಸರು ಎಳೆದೊಯ್ದ ಘಟನೆ ಮಂಗಳವಾರ ನಡೆದಿದೆ.

ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ಅವರ ರೆಡ್ಡಿ ಅವರ ಸಹೋದರಿ ಹಾಗೂ ವೈಎಸ್ ಆರ್ ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಇದ್ದ ಕಾರನ್ನು ಪೊಲೀಸರು ಎಳೆದೊಯ್ದ ಘಟನೆ ಮಂಗಳವಾರ ನಡೆದಿದೆ.
ಶರ್ಮಿಳಾ ರೆಡ್ಡಿ ಒಳಗಡೆ ಕುಳಿತಿದ್ದರೂ ಅವರ ಕಾರನ್ನು ಕ್ರೇನ್ ಸಹಾಯದಿಂದ ಪೊಲೀಸರು ಎಳೆದೊಯ್ದಿದಿದ್ದಾರೆ. ಜನ ಹಾಗೂ ಪೊಲೀಸರು ಕೂಡಾ ಅದರ ಹಿಂದೆಯೇ ಓಡಿದ್ದಾರೆ.
ಆಡಳಿತಾರೂಢ ಟಿಆರ್ ಎಸ್ ವಿರುದ್ಧ ವೈಎಸ್ ಶರ್ಮಿಳಾ ಸೋಮವಾರ ವಾರಂಗಲ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಆರ್ ಎಸ್ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಶರ್ಮಿಳಾ ಅವರ ಬೆಂಗಾವಲು ವಾಹನ ಮೇಲೆ ದಾಳಿ ನಡೆಸಿದ್ದ ಟಿಆರ್ ಎಸ್ ಕಾರ್ಯಕರ್ತರು ಬಸ್ ವೊಂದಕ್ಕೆ ಬೆಂಕಿ ಹಚ್ಚಿದ್ದರು.
ವೈಎಸ್ ಆರ್ ಟಿಪಿಯ ಕೆಲ ಮುಖಂಡರ ಕಾರುಗಳನ್ನು ಧ್ವಂಸಗೊಳಿಸಲಾಯಿತ್ತು. ನಂತರ ಶರ್ಮಿಳಾ ಅವರನ್ನು ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


