ದೇಶ

ಆಕ್ರೋಶದ ಆವೇಗದಲ್ಲಿ ಹತ್ಯೆ ನಡೆಯಿತು: ಕೋರ್ಟ್ ನಲ್ಲಿ ಅಫ್ತಾಬ್ ಹೇಳಿಕೆ

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ತಾನು ತನ್ನ ಲಿವ್ ಇನ್ ಪಾರ್ಟರ್ ನ್ನು ಆಕ್ಷಣದ ಆಕ್ರೋಶದ ಆವೇಗದಲ್ಲಿ ಹತ್ಯೆ ಮಾಡಿದೆ ಎಂದು ಕೋರ್ಟ್ ಎದುರು ಹೇಳಿಕೆ ನೀಡಿದ್ದಾನೆ.

ಆಕ್ರೋಶದ ಆವೇಗದಲ್ಲಿ ಹತ್ಯೆ ನಡೆಯಿತು: ಕೋರ್ಟ್ ನಲ್ಲಿ ಅಫ್ತಾಬ್ ಹೇಳಿಕೆ
ಶ್ರದ್ಧಾ-ಅಫ್ತಾಬ್
Published On :

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ತಾನು ತನ್ನ ಲಿವ್ ಇನ್ ಪಾರ್ಟರ್ ನ್ನು ಆಕ್ಷಣದ ಆಕ್ರೋಶದ ಆವೇಗದಲ್ಲಿ ಹತ್ಯೆ ಮಾಡಿದೆ ಎಂದು ಕೋರ್ಟ್ ಎದುರು ಹೇಳಿಕೆ ನೀಡಿದ್ದಾನೆ. 

ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆತನನ್ನು ಸಾಕೇತ್ ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. 

ಕೋರ್ಟ್ ಎದುರು ಹಾಜರುಪಡಿಸಿದ್ದಾಗ ಅಫ್ತಾಬ್, ತಾನು ತನಿಖೆಗೆ ಸಹಕರಿಸುತ್ತಿರುವುದಾಗಿ ಹೇಳಿದ್ದು, "ಆಕ್ಷಣದ ಆಕ್ರೋಶದ ಆವೇಗದಲ್ಲಿ ಹತ್ಯೆ ನಡೆದುಹೋಯಿತು" ಎಂದು ಕೋರ್ಟ್ ಗೆ ಆರೋಪಿ ಹೇಳಿಕೆ ನೀಡಿದ್ದಾನೆ. ನಡೆದ ಘಟನೆಯನ್ನು ನೆನಪಿಸಿಕೊಳ್ಳುವುದಕ್ಕೆ ತನಗೆ ಸಾಧ್ಯವಾಗುತ್ತಿಲ್ಲ ಎಂದೂ ಅಫ್ತಾಬ್ ಕೋರ್ಟ್ ವಿಚಾರಣೆ ವೇಳೆ ಹೇಳಿದ್ದಾನೆ. 

ಅಫ್ತಾಬ್ ತನ್ನ ಲಿವ್-ಇನ್-ಪಾರ್ಟನರ್ ಶ್ರದ್ಧಾ ವಾಕರ್ ನ್ನು ಅಫ್ತಾಬ್ ಎಂಬಾತ ಮೇ ತಿಂಗಳಲ್ಲಿ ಹತ್ಯೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ, ಇನ್ನು ದೆಹಲಿ ಪೊಲೀಸರು ಆತನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಬೇಕೆಂದು ನ್ಯಾಯಾಲಯದ ಅನುಮತಿಯನ್ನು ಕೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.